








ಪುತ್ತೂರು: 2025–26ನೇ ಸಾಲಿನ ಎಸ್ಎಸ್ಎಲ್ಸಿ ಮರುಮೌಲ್ಯಮಾಪನದಲ್ಲಿ ಇಂಡಿಯನ್ ಸ್ಕೂಲ್, ಉಪ್ಪಿನಂಗಡಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಶಾಲೆಗೆ ಮತ್ತಷ್ಟು ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಫಾತಿಮಾತ್ ಸಪಾನಾ ಅವರು ವಿಜ್ಞಾನದಲ್ಲಿ 6 ಅಂಕಗಳು ಹಾಗೂ ಸಮಾಜ ವಿಜ್ಞಾನದಲ್ಲಿ 2 ಅಂಕಗಳು ಸೇರಿದಂತೆ ಒಟ್ಟು 8 ಅಂಕಗಳ ಏರಿಕೆಯೊಂದಿಗೆ 600 ಅಂಕಗಳನ್ನು ಪಡೆದು ಶಾಲೆಯ ಅಗ್ರಸ್ಥಾನವನ್ನೂ, ಆಶಿಕಾ ರಿದಾ ಅವರು ಕನ್ನಡದಲ್ಲಿ 10 ಅಂಕಗಳು ಮತ್ತು ಇಂಗ್ಲಿಷಿನಲ್ಲಿ 4 ಅಂಕಗಳು ಸೇರಿದಂತೆ ಒಟ್ಟು 14 ಅಂಕಗಳ ಹೆಚ್ಚಳದಿಂದ 538 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮೊಹಮ್ಮದ್ ಬೈಶ್ ಅವರು 499 ರಿಂದ 505 ಅಂಕ, ಝುಲೈಕಾ ಹಿಬಾ 568 ರಿಂದ 571 ಅಂಕಗಳಿಗೆ ಏರಿಕೆ ಕಂಡಿದ್ದಾರೆ.


ಈ ಮರುಮೌಲ್ಯಮಾಪನದ ಫಲವಾಗಿ ಶಾಲೆಯ ಒಟ್ಟು ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.












