ಉಪ್ಪಿನಂಗಡಿ: ಹಲಸು ಮಾವು ಮೇಳ ಅಂಗವಾಗಿ ‘ಯಾನೊರಿ ಬರೊಲಿಯಾ’ ತುಳು ನಾಟಕ ; ಪೋಸ್ಟರ್ ಬಿಡುಗಡೆ

0

ಉಪ್ಪಿನಂಗಡಿ: ಟೀಮ್ UBAR ಉಪ್ಪಿನಂಗಡಿ ಪ್ರಸ್ತುತ ಪಡಿಸುವ ಹಲಸು ಮಾವು ಮೇಳವು ಜೂನ್ 19, 20, 21 ರಂದು ಹೆಚ್.ಎಂ ಆಡಿಟೋರಿಯಂನಲ್ಲಿ ನಡೆಯಲಿದೆ. ಇದರ ಅಂಗವಾಗಿ ‘ಚಾ ಪರ್ಕ ಕಲಾವಿದೆರ್ ಕುಡ್ಲ’ ತಂಡ ಅಭಿನಯಿಸುವ ‘ಯಾನೊರಿ ಬರೊಲಿಯಾ’ ತುಳು ನಾಟಕವು ಜೂನ್ 21 ರಂದು ಸಂಜೆ 5 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ನಾಟಕದ ಪೋಸ್ಟರ್ ಬಿಡುಗಡೆ ಸಮಾರಂಭವು ಮೇ 18, 2026 ರಂದು ಸಂಜೆ 7 ಗಂಟೆಗೆ ನಡೆಯಿತು. ಉದ್ಯಮಿ ವಿದ್ಯಾಧರ್ ಜೈನ್ ಹಾಗೂ ಮಾಜಿ ಸದಸ್ಯ ಧನಂಜಯ ಕುಮಾರ್ ಶೆಟ್ಟಿ ಬೈಲು ಉಪಸ್ಥಿತಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಟೀಮ್ ಉಬಾರ್ ಸದಸ್ಯರಾದ ತಾರೇಶ್ ಕೋಟೆ, ರಾಕೇಶ್ ಪ್ರಭು, ದೀಪಕ್ ಪೈ, ಶರತ್ ರಾಮನಗರ, ಶ್ರವಣ್ ರಾಮನಗರ, ದೀಪಕ್ ರಾಮನಗರ ಉಪಸ್ಥಿತರಿದ್ದರು.

ನಾಟಕದ ಟಿಕೆಟ್‌ಗಾಗಿ ಸಂಪರ್ಕಿಸಿ: 6366919789, 9611207577

LEAVE A REPLY

Please enter your comment!
Please enter your name here