ಮೇ.23: ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಲಿದೆ ಸೀತಾ ಕಸ್ತೂರಿ ಕಲ್ಯಾಣ-ಸಹಕಾರಿ ರತ್ನ ಸೀತಾರಾಮ ರೈ ದಂಪತಿಗಳ ವೈವಾಹಿಕ ಜೀವನದ 50ರ ಸಂಭ್ರಮ

0

ಸವಣೂರು ಸೀತಾರಾಮ ರೈ ಯವರು ಸುದ್ದಿ ಪತ್ರಿಕೆ ಆರಂಭಗೊಂಡಾಗ ಅದರ ಪೋಷಕ ಸದಸ್ಯರಾಗಿದ್ದರಲ್ಲದೆ ಇದುವರೆಗೂ ಕೂಡ ಪತ್ರಿಕೆಯ ಪ್ರೋತ್ಸಾಹಕರಾಗಿ ಬೆಂಬಲಿಸುತ್ತಿದ್ದಾರೆ.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಸವಣೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ಸವಣೂರು ಕೆ. ಸೀತಾರಾಮ ರೈ ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್. ರೈ ದಂಪತಿಯ ವೈವಾಹಿಕ ಜೀವನದ 50ರ ಸಂಭ್ರಮಾಚರಣೆ – ಸೀತಾ ಕಸ್ತೂರಿ ಕಲ್ಯಾಣ ಮೇ.23ರಂದು ಸೀತಾರಾಮ ರೈಯವರ ನಿವಾಸ ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಲಿದೆ.


ಮೇ. 22ರಂದು ಪೂರ್ವಾಹ್ನ ಗಂಟೆ 8-೦೦ರಿಂದ ಮಾಲೆಂಗಲ್ಲು ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ, ಶಿವಕುಮಾರ್ ಭಟ್ ಎಡಮಂಗಲ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ವೇದಮೂರ್ತಿ ಶ್ರೀವತ್ಸ ಕೆದಿಲಾಯ ಮತ್ತು ವೆಂಕಟೇಶ ಶಾಸ್ತ್ರೀ (ಕಂಚಿ ಕಾಮಕೋಟಿ ವೇದ ವಿದ್ಯಾಲಯ, ಆರಂಬೂರು, ಸುಳ್ಯ) ಯವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.


ಮೇ.23ರಂದು ಅಪರಾಹ್ನ 3-00ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆದು, ಸಂಜೆ ಗಂಟೆ 5-30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ಶ್ರೀ ಸುಬ್ರಹ್ಮಣ್ಯ ಮಠದ ಮಠಾಽಶರಾದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಒಡಿಯೂರು ಗುರುದೇವ ದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಡಾ. ಎ.ಜೆ. ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸೀತಾರಾಮ ರೈ ದಂಪತಿಗಳನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದಾರೆ. ಕೊಂಬೆಟ್ಟು ಸರಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕಾವ್ಯ ಶೆಟ್ಟಿ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಯಕ್ಷಧ್ರುವ ಪಟ್ಲ -ಂಡೇಶನ್ ಟ್ರಸ್ಟ್‌ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಕಂಬಳ ಉದ್ಘೋಷಕ ಮತ್ತು ತೀರ್ಪುಗಾರರಾದ ಎಡ್ತೂರು ರಾಜೀವ್ ಶೆಟ್ಟಿ ಮತ್ತು ಕನ್ನಡ ಚಲನಚಿತ್ರ ರಂಗದ ನಿರ್ಮಾಪಕರಾದ ರವಿ ರೈ ಕಳಸ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸೀತಾರಾಮ ರೈಯವರ ಕುಟುಂಬಿಕರಾದ ಶ್ರೀಮತಿ ರಶ್ಮಿ ಎ. ಶೆಟ್ಟಿ ಮತ್ತು ಅಶ್ವಿನ್ ಎಲ್. ಶೆಟ್ಟಿ ಸವಣೂರು, ಶ್ರೀಮತಿ ಪಲ್ಲವಿ ಎಂ. ರೈ ಮತ್ತು ಮಹೇಶ್ ರೈ ಸವಣೂರು, ಶ್ರೀಮತಿ ಅಶ್ವಿತಾ ಆರ್ ರೈ ಮತ್ತು ಡಾ. ರಾಜೇಶ್ ರೈ ಸವಣೂರು, ಇಶಾನ್ ರೈ, ಅಥರ್ವ ಶೆಟ್ಟಿ, ಅವಿ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಲಿದ್ದಾರೆ

LEAVE A REPLY

Please enter your comment!
Please enter your name here