







ಮಾಡಾವು: ಶ್ರೀ ಶಂಕರ ವಸಂತ ವೇದ ಪಾಠಶಾಲೆ ಮಾಡಾವುವಿನ ಸಮಾರೋಪ ಸಮಾರಂಭವು ಮೇ 13ರಂದು ಜರುಗಿತು.


ವೇ.ಮೂ. ಪ್ರಸನ್ನ ಕುಮಾರ ಭಟ್ ಅರ್ತ್ಯಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಸಂಸ್ಕಾರಕ್ಕೆ ವಸಂತ ವೇದ ಶಿಬಿರದ ಅವಶ್ಯಕತೆ ಇದೆ. ಸೂಕ್ತ ಸಮಯದಲ್ಲಿ ಸಿಕ್ಕಿದಾಗ ಮೌಲ್ಯಯುತವಾಗಿ ಬದುಕಲು ಸಾಧ್ಯ ಎಂದು ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ನೆಕ್ರಾಜೆ ಶ್ರೀನಿವಾಸ ನಿಡ್ವಣ್ಣಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.




ಈ ವರ್ಷದ ವೇದ ಪಾಠ ಶಾಲೆಯ ಗೌರವ ಸನ್ಮಾನವನ್ನು ವೇ.ಮೂ. ಗೋಪಾಲಕೃಷ್ಣ ಭಟ್ ಎಲ್ಯಡ್ಕ ಸ್ವೀಕರಿಸಿದರು. ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಹಾಗೂ ವೇದಾಭಿಮಾನಿ ಮಹೇಶ ಎಲ್ಯಡ್ಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರು. ವೇದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀಹರಿ ಭಟ್ ಬೆಂಗಳೂರು, ಯೋಗ ತರಬೇತುದಾರ ಪ್ರಸನ್ನ ಕುಮಾರ ಭಟ್ ಅರ್ತ್ಯಡ್ಕ, ಪಾಕ ತಜ್ಞ ವೆಂಕಟರಾಜ ಉಪಾಧ್ಯಾಯ ಕಂಬಳಿಮೂಲೆ ಇವರನ್ನು ವೇದ ಶಿಬಿರದ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಬಿರದ ಅನುಭವ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರದ ಸಂಚಾಲಕ ವೇ.ಮೂ. ಗಣೇಶ ಭಟ್ ಮಾಡಾವು ಕಾರ್ಯಕ್ರಮ ನಿರೂಪಿಸಿದರು.










