ಈಶ ವಿದ್ಯಾಲಯದಲ್ಲಿ ನೇರವಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ ಕಲಾ, ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಆರಂಭ

0

ಪುತ್ತೂರು: ಈಶ ಎಜ್ಯುಕೇಶನಲ್ & ಸೋಶಿಯಲ್ ಸರ್ವೀಸ್ ಟ್ರಸ್ಟ್ (ರಿ) ನೆಲ್ಲಿಕಟ್ಟೆ ಪುತ್ತೂರು ಇದರ ಆಡಳಿತದಲ್ಲಿ ಕಳೆದ 25 ವರ್ಷಗಳಿಂದ ಟ್ಯುಟೋರಿಯಲ್ಸ್ ಇತಿಹಾಸದಲ್ಲಿ ದಾಖಲೆಯ ಫಲಿತಾಂಶ ಗಳಿಸುತ್ತಿರುವ ಸಂಭ್ರಮದ ಬೆಳ್ಳಿ ಹಬ್ಬ ಆಚರಿಸಿದ ಈಶ ವಿದ್ಯಾಲಯದಲ್ಲಿ ದ್ವಿತೀಯ ಪಿ.ಯು.ಸಿ. ಖಾಸಗಿಯಾಗಿ, ನೇರವಾಗಿ ಕಲಾ, ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ದೈನಂದಿನ ತರಗತಿಗೆ ದಾಖಲಾತಿ ಆರಂಭಗೊಂಡಿದೆ.

ಎಸ್.ಎಸ್.ಎಲ್.ಸಿ ಪಾಸಾದವರು ಅಥವಾ ಪ್ರಥಮ ಪಿ.ಯು.ಸಿ ಕಲಾ,ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಫೇಲಾದವರು ಖಾಸಗಿಯಾಗಿ ನೇರವಾಗಿ ದ್ವಿತೀಯ ಪಿ.ಯು.ಸಿ ಮಾಡುವುದಾದಲ್ಲಿ ದೈನಂದಿನ ತರಗತಿಗೆ ಹಾಜರಾಗುವವರಿಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಅನುಭವಸ್ಥ ಉಪನ್ಯಾಸಕರಿಂದ ತರಗತಿ ನಡೆಯಲಿದೆ. ರಿಯಾಯಿತಿ ದರದಲ್ಲಿ ಕಂಪ್ಯೂಟರ್ ಶಿಕ್ಷಣ, ಉಚಿತ ಸ್ಪೋಕನ್ ಇಂಗ್ಲೀಷ್, ಈಶ ಪ್ರತಿಭಾ ದಿನಾಚರಣೆ ಈಶ ವಾರ್ಷಿಕ ಕ್ರೀಡಾಕೂಟ, ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ತರಬೇತಿ, ಶೈಕ್ಷಣಿಕ ಪ್ರವಾಸದೊಂದಿಗೆ ವಿಶೇಷ ತರಬೇತಿ ಇತ್ಯಾದಿ ಲಭ್ಯವಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆ ಅಥವಾ ಸಂಸ್ಥೆಯ 8722293944, 9448153379 ಈ ನಂಬರಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಈಶ ವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.


ಖಾಸಗಿಯಾಗಿ ಎಸ್.ಎಸ್.ಎಲ್.ಸಿ ದೈನಂದಿನ ತರಗತಿ:
6th,7th,8th,9th ಲ್ಲಿ ಫೇಲಾದವರು ಅಥವಾ ಯಾವುದೇ ವಿದ್ಯಾರ್ಹತೆಯಿಲ್ಲದೆ 15 ವರ್ಷ ವಯಸ್ಸಾದವರು ಖಾಸಗಿಯಾಗಿ ನೇರವಾಗಿ ಎಸ್.ಎಸ್.ಎಲ್.ಸಿ ದೈನಂದಿನ ತರಗತಿಗೆ ಹಾಜರಾಗುವವರಿಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಅನುಭವಸ್ಥ ಉಪನ್ಯಾಸಕರಿಂದ ತರಗತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 8722293944, 9448153379 ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here