ತುಂಬೆ: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಪುತ್ತೂರು: ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ತುಂಬೆ 2026-27ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಂಸ್ಥೆಯು ಕೇಂದ್ರ ಸರಕಾರದ National Council for Vocational Training (NCVT) ನವದೆಹಲಿಯೊಂದಿಗೆ ಸಂಯೋಜನೆಗೊಂಡಿದ್ದು ಮತ್ತು ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ನಿರ್ದೇಶನಾಲಯ ಬೆಂಗಳೂರು ಇದರ ಮಾನ್ಯತೆಯನ್ನು ಪಡೆದಿರುತ್ತದೆ. ಸಂಸ್ಥೆಯಲ್ಲಿ ಎರಡು ವರ್ಷದ ತಾಂತ್ರಿಕ ತರಬೇತಿ ಕೋರ್ಸುಗಳಾದ ಮೆಕ್ಯಾನಿಕ್ ರೆಫ್ರಿಜರೇಶನ್ & ಏರ್ ಕಂಡೀಶನಿಂಗ್ ಟೆಕ್ನೀಷಿಯನ್ (RACT), ಇಲೆಕ್ಟ್ರಾ ನಿಕ್ಸ್ ಮೆಕ್ಯಾನಿಕ್ (ಇಒ) ಹಾಗೂ ಒಂದು ವರ್ಷದ ತರಬೇತಿ ಕೋರ್ಸುಗಳಾದ ಡೀಸೆಲ್ ಮೆಕ್ಯಾನಿಕ್ (ಒಆ), ವೆಲ್ಡರ್ (Welder), Computer Operating Programm Assistant (COPA) ಹಾಗೂ Sewing Technology (Fashion Design and Tailoring) ಕೋರ್ಸುಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ತರಬೇತಿಯನ್ನು ಪಡೆಯಲು ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ ಉತ್ತೀರ್ಣ/ಅನುತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಸಕ್ತ ವರ್ಷದ ದಾಖಲಾತಿಯು ಪ್ರಾರಂಭವಾಗಿದೆ. ಪ.ಜಾತಿ/ಪ.ಪಂಗಡ/ಅಲ್ಪಸಂಖ್ಯಾತ/ಹಿಂದುಳಿದ ವರ್ಗಗಳಿಗೆ/ಕಾರ್ಮಿಕ ಇಲಾಖೆ ಸ್ಕಾಲರ್ ಶಿಪ್, ಬೀಡಿ ಸ್ಕಾಲರ್ ಶಿಪ್, ವಿದ್ಯಾಸಿರಿ ಸ್ಕಾಲರ್ ಶಿಪ್ ಹಾಗೂ ಮತ್ತಿತರ ಸ್ಕಾಲರ್ ಶಿಪ್‌ಗಳಿಗೆ ಅರ್ಜಿ ಸಲ್ಲಿಸಲು ಸಂಸ್ಥೆಯಿಂದಲೇ ವ್ಯವಸ್ಥೆ ಮಾಡಿಕೊಡಲಾಗುವುದು. ಸಂಸ್ಥೆಯಲ್ಲಿ ಮೋಟಾರ್ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆ–9449639916, 9844703804, 9740271005 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here