ಪ್ರೀಮಿಯರ್ ಶೋ ನಲ್ಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಗಜಾನನ ಕ್ರಿಕೆಟರ‍್ಸ್- ಚಿತ್ರದ ಒಂದೊಂದು ಘಟನೆಯನ್ನು ಚಿತ್ರ ತಂಡದ ಜೊತೆ ಹಂಚಿಕೊಂಡ ಪ್ರೇಕ್ಷಕರು

0

ಪುತ್ತೂರು: ನಾಳೆ ಮೇ.22ರಂದು ತೆರೆಕಾಣಲಿರುವ ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ’ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರದ ಪ್ರೀಮಿಯರ್ ಶೋ ನಲ್ಲೆ ಮೆಚ್ಚುಗೆ ಗಳಿಸಿದೆ. ಚಿತ್ರ ನೋಡಿದ ಪ್ರೇಕ್ಷರು ಕೊನೆಯಲ್ಲಿ ಚಿತ್ರದ ಒಂದೊಂದು ಘಟನೆಯನ್ನು ಚಿತ್ರ ತಂಡದ ಜೊತೆ ಹಂಚಿಕೊಂಡರು.


ಗಜಾನನ ಕ್ರಿಕೆಟರ್ಸ್ ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕಥೆ ಹೊಂದಿದೆ. ಅಂಡರ್ ಆರ್ಮ್ ಜಗತ್ತಿನಲ್ಲಿ ನಮ್ಮ ಮಣ್ಣಿನ ಆಟವನ್ನು ಈ ಚಿತ್ರದಲ್ಲಿ ಪ್ರದರ್ಶಿಸಲಾಗಿರುವುದು ವಿಶೇಷ. ಮೇ.22ರಂದು ಬಿಡುಗಡೆಗೊಳ್ಳಲಿರುವ ಗಜನಾನ ಕ್ರಿಕೆಟರ‍್ಸ್ ಚಲನಚಿತ್ರದ ಪ್ರೀಮಿಯರ್ ಶೋ ಅನ್ನು ಮೇ.21ರಂದು ಪುತ್ತೂರು ಭಾರತ್ ಸಿನಿಮಾಸ್‌ನಲ್ಲಿ ಪ್ರದರ್ಶಿಸಲಾಯಿತು.

ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರಿಕೆಟ್ ಜಗತ್ತಿನ ಹೊಸ ಪ್ರಯತ್ನವನ್ನು ಎಲ್ಲರು ಮೆಚ್ಚಿದ್ದಾರೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಕಥೆ ಒಳಗೊಂಡಿದೆ.


ಸಂಪ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರು ಪ್ರೀಮಿಯರ್ ಶೋ ಅನ್ನು ಉದ್ಘಾಟಿಸಿ ಮಾತನಾಡಿ, ಯುವಜನತೆಗೆ ಮನೋರಂಜನೆ ಸಿಗುವುದು ಸಿನಿಮಾ ಮತ್ತು ಕ್ರಿಕೆಟ್ ನಲ್ಲಿ ಗಜಾನನ ಕ್ರಿಕೆಟರ್ಸ್ ಎರಡನ್ನು ಒಳಗೊಂಡಿದೆ. ಈ ಚಿತ್ರ ಯುವ ಜನರ ಮನಸ್ಸು ಗೆದ್ದು ವಿಜಯಶಾಲಿಯಾಗುತ್ತದೆ ಎಂದರು.

ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ಮಾತನಾಡಿ, 2007ನೇ ವಿಶ್ವ ಕಪ್ ಪ್ರಥಮ ಬಾರಿ ಗೆದ್ದಾಗ 6 ಬಾಲ್ ನಲ್ಲಿ ವಿಶೇಷ ದಾಖಲೆ ಮಾಡಿತ್ತು. ಅದೇ ರೀತಿ ಈ ಚಿತ್ರವು ವಾರದ 6 ದಿನಗಳಲ್ಲೂ ಅದ್ಭುತವಾದ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರವಾಗಲಿ ಎಂದರು. ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ, ಕಹಳೆ ನ್ಯೂಸ್ ನ ಶ್ಯಾಮ ಸುದರ್ಶನ್ ಹೊಸಮೂಲೆ, ಹಲವು ಚಲನಚಿತ್ರಗಳ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ದೇವಿಚರಣ್, ನಟಿ ದೀಕ್ಷಾ ರೈ, ಅರುಣ್ ರೈ, ರವಿಪ್ರಸಾದ್ ಶೆಟ್ಟಿ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಭಾರತ್ ಸಿನಿಮಾಸ್ ನ ಮ್ಯಾನೇಜರ್ ಜಯರಾಮ ವಿಟ್ಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಹೇಮಾ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.


ಪ್ರೇಕ್ಷಕರೊಂದಿಗೆ ಚಿತ್ರ ತಂಡ

ಪ್ರೀಮಿಯರ್ ಶೋ ಸಂದರ್ಭ ಚಿತ್ರದ ನಿರ್ಮಾಪಕರು ಮತ್ತು ಚಿತ್ರದಲ್ಲಿ ನಟಿಸಿದ ಪ್ರಜ್ವಲ್ ಶೆಟ್ಟಿ, ಕಥೆ, ಚಿತ್ರಕಥೆ ಬರೆದ ಕೀರ್ತನ್ ಭಂಡಾರಿ, ಚಿತ್ರದ ನಟ ವಿನೀತ್ ಕುಮಾರ್, ಸಮತಾ ಅಮೀನ್, ಅನ್ವಿತಾ ಸಾಗರ್ ಆಗಮಿಸಿ ಪ್ರೀಮಿಯರ್ ಶೋ ಕೊನೆಯ ತನಕವಿದ್ದು, ಪ್ರೇಕ್ಷಕರೊಂದಿಗೆ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆಗಳನ್ನು ಪಡೆದು‌ಕೊಂಡರು. ನಟ ವಿನಿತ್ ಕುಮಾರ್ ಅವರು ಚಿತ್ರದ ಕುರಿತು ಹೆಚ್ಚಿನ ಪ್ರಚಾರ ನೀಡಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here