ಕ್ಯಾಂಪ್ಕೊ ‘ಸಾಂತ್ವನ’ ಯೋಜನೆ – ಧನಸಹಾಯ ಹಸ್ತಾಂತರ

0

ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯ ರಾಮಕೃಷ್ಣ ಭಟ್ ಎಂ. ಅವರ ತೆರೆದ ಹೃದಯ ಚಿಕಿತ್ಸೆಗೆ ಸಂಸ್ಥೆಯಿಂದ ಮಂಜೂರಾದ 2 ಲಕ್ಷ ರೂ.ಗಳ ಸಹಾಯಧನದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಮುರಳಿಕೃಷ್ಣ ಕೆ.ಎನ್. ಅವರು ರಾಮಕೃಷ್ಣ ಭಟ್ ಎಂ. ಅವರಿಗೆ 2,00,000 ರೂ.ಗಳ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪುತ್ತೂರು ಪ್ರಾಂತೀಯ ಪ್ರಬಂಧಕ ಪ್ರಕಾಶ್ ಕುಮಾರ್ ಶೆಟ್ಟಿ, ಪುತ್ತೂರು ಶಾಖಾ ಪ್ರಬಂಧಕ ಗಣೇಶ ಕೆ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here