ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2 ರಲ್ಲಿ ನರೇಂದ್ರ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ಶಾಲ್ಮಲಿ ಆರ್. ಎಸ್. ರಾಜ್ಯಕ್ಕೆ 4ನೇ ಸ್ಥಾನ, ಶಷ್ಟಿಕಾ ಎಮ್.ಕೆ. ರಾಜ್ಯಕ್ಕೆ 8ನೇ ಸ್ಥಾನ

0

ಪುತ್ತೂರು: 2026ರ ಎಪ್ರಿಲ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2 ರ ಫಲಿತಾಂಶ ಪ್ರಕಟಗೊಂಡಿದ್ದು,ತೆಂಕಿಲದ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಶಾಲ್ಮಲಿ ಆರ್. ಎಸ್. 597(99.5%)ಅಂಕಗಳನ್ನು ಗಳಿಸಿ ರಾಜ್ಯದಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲ್ಮಲಿ ಆರ್. ಎಸ್. ಇವರು ಲೆಕ್ಕಶಾಸ್ತ್ರ-100, ಅರ್ಥಶಾಸ್ತ್ರ-100, ಸಂಸ್ಕೃತ-100,ಮೂಲಗಣಿತ-100, ವ್ಯವಹಾರ ಅಧ್ಯಯನ-100,ಇಂಗ್ಲಿಷ್-97 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ.


ಶಷ್ಟಿಕಾ ಎಮ್.ಕೆ.ಇವರು 593 (98.83%), ಲೆಕ್ಕಶಾಸ್ತ್ರ-97, ಅರ್ಥಶಾಸ್ತ್ರ-100, ಕನ್ನಡ-100, ಸಂಖ್ಯಾಶಾಸ್ತ್ರ-100,ವ್ಯವಹಾರ ಅಧ್ಯಯನ-100, ಇಂಗ್ಲಿಷ್-96 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ಎಂಟನೇ ಸ್ಥಾನವನ್ನು ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಅರ್ಚನಾ 588 , ಅನುಶ್ರೀ 540, ಜನನಿ ಎಮ್. ಜಿ.512,ವಾಣಿಜ್ಯ ವಿಭಾಗದಲ್ಲಿ ಸುಜಯ್ ಎಸ್. ಶೆಟ್ಟಿ 533 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.


ದ್ವಿತೀಯ ಪಿಯುಸಿಯ ಒಟ್ಟು 42 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ.98 ಫಲಿತಾಂಶ ಲಭಿಸಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here