ಮೇ.25: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ

0

ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕಡಿಕೆ ಚಾವಡಿಯಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯಕ್ರಮವದ ಅಂಗವಾಗಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯು ಮೇ.25ರಂದು ನಡೆಯಲಿದೆ.
ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7.32ರ ಮೀನ ಲಗ್ನದಲ್ಲಿ ದೇವರಿಗೆ ಅನುಜ್ಞಾ ಕಲಶ ನಡೆದು ನಂತರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ.


ಜೀರ್ಣೋದ್ಧಾರ ಕಾರ್ಯಗಳು:
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು ಹೊರಾಂಗಣದ ಸುತ್ತ ಮೇಲ್ಚಾವಣಿಗೆ ಶೀಟ್ ಅಳವಡಿಕೆಯ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಕ್ಷೇತ್ರದ ಗರ್ಭಗುಡಿ, ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆಯ ಛಾವಣಿ, ಕಡಿಕೆ ಚಾವಡಿಯಲ್ಲಿ ಪಂಚಮುಖದ ಕದಿಕೆ ಚಾವಡಿ, ದೈವಗಳ ಬಂಡಿ ಇಡುವ ಕೊಠಡಿಗಳ ನಿರ್ಮಾಣ ಸೇರಿದಂತೆ ಸುಮಾರು ರೂ.3.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದು 2027ರ ಜ.10ರಿಂದ ವೈಭವದ ಬ್ರಹ್ಮಕಲಶೋತ್ಸವ ನೆರವೇರಲಿದೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here