ಉದನೆ: ಚರಂಡಿಗೆ ಬಿದ್ದ ಲಾರಿ-ಚಾಲಕ, ಕ್ಲೀನರ್ ಪಾರು

0

ನೆಲ್ಯಾಡಿ: ಸರಕು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಗೆ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆಯಲ್ಲಿ ನಡೆದಿದೆ.


ಹಾಸನ ಕಡೆಗೆ ತೆರಳುತ್ತಿದ್ದ ಸರಕು ಸಾಗಾಟದ ಲಾರಿ ಉದನೆ ಪೇಟೆಯಲ್ಲಿ ಶಿಬಾಜೆ ಕಡೆಗೆ ತೆರಳುವ ರಸ್ತೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಇಲ್ಲಿ ರಸ್ತೆ ಬದಿಯಲ್ಲೇ ಅಂಗಡಿಯೊಂದಿದ್ದು ಲಾರಿ ಅದರ ಮೇಲೆ ಬೀಳುವುದು ಸ್ವಲ್ಪದರದಲ್ಲೇ ತಪ್ಪಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here