ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಮೃದ್ದಿ ಜೆ.ಶೆಟ್ಟಿಗೆ ದ್ವಿತೀಯ ಪಿಯುಸಿ ಪರೀಕ್ಷೆ – 2 ರಲ್ಲಿ 8 ನೇ ರ‍್ಯಾಂಕ್

0



ಪುತ್ತೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ – 2 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಙಾನ ವಿಭಾಗದ ವಿದ್ಯಾರ್ಥಿನಿ ಸಮೃದ್ದಿ ಜೆ.ಶೆಟ್ಟಿ 600 ರಲ್ಲಿ 593 ಅಂಕಗಳನ್ನು ಪಡೆದು ರಾಜ್ಯದಲ್ಲಿ 8ನೇ ರ‍್ಯಾಂಕ್ ಪಡೆದಿದ್ದಾರೆ.

ಇವರು ಫಿಸಿಕ್ಸ್ ನಲ್ಲಿ 99 ಅಂಕಗಳನ್ನು ಪಡೆದಿದ್ದು ಮರು ಮೌಲ್ಯಮಾಪನದ ಬಳಿಕ 1 ಹೆಚ್ಚುವರಿ ಅಂಕದೊಂದಿಗೆ 100 ಅಂಕಗಳನ್ನು ಹಾಗೂ ಇಂಗ್ಲೀಷ್‌ನಲ್ಲಿ 91 ಅಂಕಗಳನ್ನು ಪಡೆದಿದ್ದು ಇದನ್ನು ಪುನ ಬರೆದು ಹೆಚ್ಚುವರಿ 6 ಅಂಕಗಳೊಂದಿಗೆ 97 ಅಂಕಗಳನ್ನು ಪಡೆದು ಒಟ್ಟು 7 ಅಂಕಗಳನ್ನು ಹೆಚ್ಚುವರಿ ಗಳಿಸಿ ರಾಜ್ಯದಲ್ಲಿ 8ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೆಮೆಸ್ಟ್ರಿಯಲ್ಲಿ 99 ಮತ್ತು ಕಂಪ್ಯೂಟರ್ ಸೈನ್ಸ್,ಗಣಿತದಲ್ಲಿ 100, ಹಿಂದಿಯಲ್ಲಿ 97 ಅಂಕ ಪಡೆದು ಒಟ್ಟು 593 ಅಂಕ ಗಳಿಸಿರುತ್ತಾರೆ.

ಇವರು ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ದಂಪತಿಯ ಪುತ್ರಿ

LEAVE A REPLY

Please enter your comment!
Please enter your name here