ಕಾೖಮಣ ಕೃಷ್ಣಾಪುರ ಜೋಕಾಲಿ ಬಳಗದ ಪದಾಧಿಕಾರಿಗಳ ಆಯ್ಕೆ

0

ಕಾಣಿಯೂರು: ಕಾೖಮಣ ಕೃಷ್ಣಾಪುರ ಜೋಕಾಲಿ ಬಳಗದ ಮಹಾಸಭೆಯು ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಗೌಡ ಮುಂಡಾಳ ಅವರ ಅಧ್ಯಕ್ಷತೆಯಲ್ಲಿ ಮೇ 24ರಂದು ನಡೆಯಿತು.

ಈ ಸಂದರ್ಭದಲ್ಲಿ ಜೋಕಾಲಿ ಬಳಗದ ನೂತನ ಪದಾಧಿಕಾರಿಗಳನ್ನು ಆಯ್ಕೆಯಾದ ಮಾಡಲಾಯಿತು. ಅಧ್ಯಕ್ಷರಾಗಿ ಜಯಪ್ರಕಾಶ್ ಗೌಡ ಕಳುವಾಜೆ, ಉಪಾಧ್ಯಕ್ಷರಾಗಿ ಶರತ್ ಮುಂಡಾಳ,
ಕಾರ್ಯದರ್ಶಿಯಾಗಿ ನಿತಿನ್ ಪಳಸತ್ತಡಿ, ಕೋಶಾಧಿಕಾರಿಯಾಗಿ ಅಕ್ಷಯ್ ಕುಂಡಾಳ, ಜೊತೆ ಕಾರ್ಯದರ್ಶಿಯಾಗಿ ನಿಶಾಂತ್ ಮುಂಡಾಳರವರನ್ನು ಆಯ್ಕೆ ಮಾಡಲಾಯಿತು. ಜೋಕಾಲಿ ಬಳಗದ ಗೌರವಾಧ್ಯಕ್ಷ ಸೀತಾರಾಮ ಗೌಡ ಮುಂಡಾಳ, ಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಮಾಜಿ ಅಧ್ಯಕ್ಷ ವಿಜೇತ್ ಮುಂಡಾಳ, ಕಾರ್ಯದರ್ಶಿ ಪವನ್ ಮರಕ್ಕಡ, ಸದಸ್ಯರಾದ ಚೆನ್ನಪ್ಪ ಗೌಡ ಮುಂಡಾಳ, ಕೇಶವ ಗೌಡ ಸಂಜಕು, ವಿಜೇತ್ ಕುಂಡಾಳ, ಪ್ರೀತಮ್ ಮುಂಡಾಳ ಮತ್ತು ಹರ್ಷಿತ್ ಕೂರ ಮತ್ತಿತರರು ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಚಂದ್ರಶೇಖರ ಗೌಡ ಮುಂಡಾಳ ಸ್ವಾಗತಿಸಿ, ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here