ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 18 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಂಜೂರು

0

ಸಾರ್ವಜನಿಕರ ಆರೋಗ್ಯ ವಿಚಾರದಲ್ಲೂ ಸರಕಾರದ ದಿಟ್ಟ ಹೆಜ್ಜೆ; ಅಶೋಕ್ ರೈ

ಪುತ್ತೂರು: ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಗ್ರಾಮದ ಮೂಲೆ ಮೂಲೆಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಸರಕಾರ ಒತ್ತು ನೀಡುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 18 ಕೇಂದ್ರಗಳನ್ನು ಸರಕಾರ ಮಂಜೂರು ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆದುಮೂಲೆ ಎಂಬಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಪುತ್ತೂರು ವಿಧಾನಭಾ ಕ್ಷೇತ್ರ ವ್ಯಾಪ್ತಿಯ ವಳಾಲು, ಕೆಮ್ಮಾರ, ನರಿಮೊಗರು, ಬೆಟ್ಟಂಪಾಡಿ, ಬನ್ನೂರು, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ಕೆಯ್ಯೂರು, ಪೆರುವಾಯಿ, ವಿಟ್ಲ, ಗಡಿಯಾರ, ಬಿಳಿಯೂರು, ಇಡ್ಕಿದು,ಮಿತ್ತೂರು, ಕೆದಿಲ, ಕುಳ, ಪಡ್ನೂರು, ಕುರಿಯ, ನೆಕ್ಕಿಲಾಡಿಯಲ್ಲಿ ಹೊಸ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಸರಕಾರದ ಸೌಲಭ್ಯ ನೇರವಾಗಿ ಲಭಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆ ಯಾವುದೇ ಮದ್ಯವರ್ತಿಗಳಿಲ್ಲದೆ ನೇರವಾಗಿ ದೊರೆಯುತ್ತಿದೆ. ದೇಶದೆಲ್ಲೆಡೆ ಬೆಲೆ ಏರಿಕೆಯಿಂದ ಜನ ತೊಂದರೆಯಲ್ಲಿದ್ದರೂ ಕರ್ನಾಟಕದ ಗ್ಯಾರಂಟಿ ಜನತೆಗೆ ಬದುಕುವ ಗ್ಯಾರಂಟಿಯನ್ನು ನೀಡಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿಗೆ ಒಳಪಡುವ ವಿಟ್ಲ ಭಾಗದ ಅಭಿವೃದ್ದಿಗೆ ಇನ್ನಷ್ಟು ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ಸ್ಥಳ ದಾನಿಗೆ ಅಭಿನಂದನೆ
ಕೆದುಮೂಲೆಯಲ್ಲಿ ಆರೋಗ್ಯ ಕ್ಷೇಮಕೇಂದ್ರ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಸ್ಥಳೀಯರಾದ ಸೀತಾರಾಮ ಶೆಟ್ಟಿಯವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು.
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ದಾನಿ ಸೀತಾರಾಮ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ವಿಟ್ಲ, ಅಶೋಕ ಪೂಜಾರಿ, ರಮನಾಥ ವಿಟ್ಲ, ಹಸೈನಾರ್ , ಅಬ್ಬು ನವಗ್ರಾಮ ಸೇರಿದಂತೆ ಸ್ಥಳೀಯ ಫಲಾನುಭವಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here