ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ – ನೂತನ ಕಂಪ್ಯೂಟರ್ ಕೊಠಡಿ, ವಿಸ್ತ್ರತ ವಿದ್ಯಾರ್ಥಿನಿಲಯ, ಸಿಬಿಎಸ್‌ಇ 9ನೇ ತರಗತಿ ಉದ್ಘಾಟನೆ

0

ವಿದ್ಯಾರ್ಥಿಗಳು ತಂದೆ, ತಾಯಿಯ ಕನಸ್ಸು ನನಸು ಮಾಡಿ; ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಡಳಿತಕ್ಕೆ ಒಳಪಟ್ಟ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕಂಪ್ಯೂಟರ್ ಕೊಠಡಿ, ವಿಸ್ತೃತ ವಿದ್ಯಾರ್ಥಿ ನಿಲಯ ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಸಿಬಿಎಸ್‌ಇ 9ನೇ ತರಗತಿಯ ಉದ್ಘಾಟನೆ ಮೇ 26ರಂದು ನಡೆಯಿತು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಶ್ರೀ ರಾಮಕುಂಜೇಶ್ವರ ಕ್ಷೇತ್ರವೇ ಪಾವನವಾಗಿರುವಂತದ್ದು. ಇಲ್ಲಿನ ವಿದ್ಯಾಸಂಸ್ಥೆಯ ಪಕ್ಕದಲ್ಲೇ ದೇವಾಲಯವಿದೆ. ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅವತಾರ ತಾಳಿದ ಕ್ಷೇತ್ರವಿದು. ಅವರು ಕಲಿತಿರುವ ಸಂಸ್ಥೆ ಇದು. ಇಂತಹ ವಿದ್ಯಾಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈಗ ಇಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಇವರೆಲ್ಲರನ್ನೂ ಮೀರಿಸುವಂತೆ ಬೆಳೆಯಲಿ ಎಂದರು. ಶ್ರೀ ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆ ಪ್ರತಿವರ್ಷ ಬೆಳವಣಿಗೆ ಕಾಣುತ್ತಿದೆ. ಸಂಸ್ಥೆ ಭೌತಿಕವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸತ್ವ ಬೆಳೆದಿರುವುದನ್ನೂ ಕಂಡಿದ್ದೇವೆ. ಇದಕ್ಕೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮಾಡಿಕೊಟ್ಟಿರುವ ವ್ಯವಸ್ಥೆ ಕಾರಣವಾಗಿದೆ. ಇವೆಲ್ಲವನ್ನೂ ಸರಿಯಾಗಿ ಸದುಪಯೋಗಪಡಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಮಕ್ಕಳ ಮೇಲಿದೆ. ತಂದೆ, ತಾಯಿಗಳ ಕನಸ್ಸು ನನಸು ಮಾಡಲು ಎಲ್ಲಾ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿ. ಎಲ್ಲರಿಗೂ ಶ್ರೇಯಸ್ಸು ಲಭಿಸಲಿ ಎಂದು ಸ್ವಾಮೀಜಿ ನುಡಿದರು.


ಮುಖ್ಯ ಅತಿಥಿಯಾಗಿದ್ದ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜ್‌ನ ಪ್ರೋಫೆಸರ್ ಡಾ.ಅವಿನ್ ಆಳ್ವ ಅವರು ಮಾತನಾಡಿ, ಶಿಕ್ಷಣವೇ ಮುಖ್ಯ ಅಲ್ಲ. ಗುಣಮಟ್ಟ, ತಂತ್ರಜ್ಞಾನ, ಮೌಲ್ಯಗಳು, ಅವಕಾಶಗಳು ಸೇರಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಹೆಮ್ಮೆ ಎಂದರು. ಇನ್ನೋರ್ವ ಅತಿಥಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ ಮೈಸೂರಿನ ಅನಂತ ವೈದ್ಯ ಮಾತನಾಡಿ, ನನ್ನ ಮಗನಿಗೆ ಪುನರ್ಜನ್ಮ ಕೊಟ್ಟ ಸ್ಥಳವಿದು. 2005ರಲ್ಲಿ ಇಲ್ಲಿನ ವಿದ್ಯಾರ್ಥಿ ನಿಲಯಕ್ಕೆ ಮಗನನ್ನು ಸೇರಿಸಿದ್ದೇನೆ. ಪಿಯುಸಿಯಲ್ಲಿ ಶೇ.75 ಅಂಕ ಪಡೆದುಕೊಂಡಿದ್ದಾನೆ. ಬಳಿಕ ಮೈಸೂರಿನಲ್ಲಿ ಬಿ.ಕಾಂ. ಮಾಡಿ ಈಗ ಒಳ್ಳೆಯ ಉದ್ಯೋಗದಲ್ಲಿದ್ದಾನೆ ಎಂದರು. ಬೆಂಗಳೂರಿನ ಕಂಪನಿಯೊAದರಲ್ಲಿ ಉದ್ಯೋಗಿಯಾಗಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಇಂದ್ರೇಶ್ ಸಿ. ಮಾತನಾಡಿ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಶಿಸ್ತು ಕಲಿತಿದ್ದೇನೆ. ಈಗ ಸಂಸ್ಥೆ ಬಹಳಷ್ಟು ಪ್ರಗತಿಯಾಗಿದೆ. ಇಲ್ಲಿ ಕಲಿಕೆಗೆ ಪೂರಕ ವಾತಾವರಣ ಇದೆ ಎಂದರು.


ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು, ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಗೆ ಸಂಸ್ಥೆಯಿAದ ಹಾಜರಾದ 146 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು 600ಕ್ಕಿಂತ ಮೇಲೆ, 84 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ 59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 500ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಿದ್ದೇವೆ. ನಾವು ಸಾಧನೆಗೆ ವಿದ್ಯಾರ್ಥಿಗಳಿಗೆ ದಾರಿ ಮಾಡಿಕೊಟ್ಟಿದ್ದೇವೆ. ಅದರಲ್ಲಿ ಮುಂದೆ ಸಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 1995ರಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯ ಆರಂಭಗೊAಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಈ ತನಕ 1 ಮಗು ಮಾತ್ರ ಅನುತ್ತೀರ್ಣಗೊಂಡಿದೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಸಾಧಕ ವಿದ್ಯಾರ್ಥಿಗಳಾಗಿದ್ದಾರೆ. ಪ್ರಸ್ತುತ ವರ್ಷ 1350 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 112 ಮಂದಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿದ್ದಾರೆ ಎಂದರು.


ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು, ಸಂಚಾಲಕ ಟಿ.ನಾರಾಯಣ ಭಟ್, ಸದಸ್ಯರಾದ ಬಾಲಚಂದ್ರ ಮುಚ್ಚಿಂತ್ತಾಯ, ಹರಿನಾರಾಯಣ ಆಚಾರ್, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಎ.ಪಿ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನೀರಜ್‌ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್.ವಂದಿಸಿದರು. ಶಿಕ್ಷಕ ಕಿಶೋರ್‌ಕುಮಾರ್ ನಿರೂಪಿಸಿದರು. ಶಿಕ್ಷಕಿ ಹರಿಣಿ ಪ್ರಾರ್ಥಿಸಿದರು. ಆಡಳಿತಾಧಿಕಾರಿ ಆನಂದ ಎಸ್.ಟಿ., ಮೇನೇಜರ್ ರಮೇಶ್ ರೈ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

126 ವಿದ್ಯಾರ್ಥಿಗಳಿಗೆ ಗೌರವಾರ್ಪಣೆ;
2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ 126 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಗೌರವಾರ್ಪಣೆ ನಡೆಯಿತು. 500ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಸಬ್ಜೆಕ್ಟ್ನಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಸಂಸ್ಥೆಯ ಪರವಾಗಿ ಶಾಲು, ಹಾರಾರ್ಪಣೆ, ನಗದು ಪುರಸ್ಕಾರ ನೀಡಿ ಗೌರವಿಸಿ ಆಶೀರ್ವದಿಸಿದರು. ಶಿಕ್ಷಕ ರಾಧಾಕೃಷ್ಣ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಗಿಚ್ಚಿ ಗಿಲಿಗಿಲಿ ಪ್ರತಿಭೆಗಳಿಗೆ ಸನ್ಮಾನ;
ಕಲರ‍್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಜೂನಿಯರ್ ಕಾಮಿಡಿ ಶೋನಲ್ಲಿ ನಟಿಸುತ್ತಿರುವ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಆತ್ಮೀ ಗೌಡ ಸಂಪ್ಯಾಡಿ, ಅದ್ವಿಕಾ ಬಾಕಿಲ ಅವರನ್ನು ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here