






ಪುತ್ತೂರು: ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿಯ ಮಹಾಸಭೆ, ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಬಿಲ್ಲವ ಸಂಘದ ಅಧ್ಯಕ್ಷ ಬಾಳಪ್ಪ ಸುವರ್ಣ ಬಾಲಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



ಪುತ್ತೂರು ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ. ಮಹೇಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ತಾಲೂಕು ಬಿಲ್ಲವ ಸಂಘದಿಂದ ಗ್ರಾಮ ಸಮಿತಿಗಳಿಗೆ ನೀಡುವ ಸವಲತ್ತುಗಳ ಬಗ್ಗೆ ವಿವರಿಸಿದರು. ಕೆದಂಬಾಡಿ ಗ್ರಾಮ ಸಮಿತಿಯು ಎಲ್ಲಾ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಾಲೂಕಿನಲ್ಲೇ ಪ್ರಥಮ ಸ್ಥಾನದಲ್ಲಿದೆ” ಎಂದು ಶ್ಲಾಘಿಸಿ ಸದಸ್ಯರನ್ನು ಅಭಿನಂದಿಸಿದರು.



ಕುಂಬ್ರ ವಲಯ ಸಂಚಾಲಕ ಬಾಬು ಪೂಜಾರಿ ಇದ್ಪಾಡಿ ಮಾತನಾಡಿ, “18 ವರ್ಷ ತುಂಬಿದ ಗ್ರಾಮದ ಎಲ್ಲಾ ಯುವ ಜನತೆ ಪುತ್ತೂರು ತಾಲೂಕು ಬಿಲ್ಲವ ಸಂಘದ ಸದಸ್ಯರಾಗಿ ಸಂಘಕ್ಕೆ ಸಲಹೆ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.

ಹಿರಿಯ ಮಾರ್ಗದರ್ಶಿ ಕೋಚಣ್ಣ ಪೂಜಾರಿ ಎಂಡೆಸಾಗು ಅವರು ಗ್ರಾಮ ಸಮಿತಿಯ ಬೆಳವಣಿಗೆಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಉದ್ಯೋಗ ಪಡೆದು ಸಮಾಜಕ್ಕೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು. ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಕೆದಂಬಾಡಿ ಮಹಿಳಾ ವೇದಿಕೆ ಅಧ್ಯಕ್ಷೆ ಹೇಮಲತ, ಶಿವಪ್ರಸಾದ್ ಕುಂಬ್ರ ಉಪಸ್ಥಿತರಿದ್ದರು.ಸಾಧಕರಿಗೆ ಸನ್ಮಾನ: ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅದೀಕ್ಷ ಎಚ್.ಕೆ, ಅನುಷ ಮುಂಡಾಳ, ಸನ್ನಿಧಿ ಕುರಿಕ್ಕಾರ, ಪೂಜಾ ಕುರಿಕ್ಕಾರ, ಪ್ರಾರ್ಥನ್ ಕುರಿಕ್ಕಾರ ಅವರನ್ನು ಗ್ರಾಮ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಗೆ ಪುಸ್ತಕ ವಿತರಣೆ, ಗೌರವ ಸನ್ಮಾನ ಕಾರ್ಯ ನಡೆಯಿತು.

ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು.ಪುಷ್ಪಾ ಬೊಳೋಡಿ, ಜಯಲತ ಬಾರಿಕೆ, ಬೇಬಿ ಬಾರಿಕೆ, ಪ್ರಜ್ಞಾ ಉಮೇಶ್ ಕನ್ನಡಮೂಲೆ, ಕೃಷ್ಣಪ್ಪ ತಿಂಗಳಾಡಿ, ಭಾಸ್ಕರ ಪಿದಪಟ್ಲ ಅವರು ಅತಿಥಿಗಳನ್ನು ಗೌರವಿಸಿದರು.ಗಂಗಾಧರ ಬೋಳೋಡಿ, ಮಾಲತಿ ಕೋಚಣ್ಣ ಪೂಜಾರಿ ಎಂಡೆಸಾಗು, ಸುಧಾಕರ ಸುವರ್ಣ ಕನ್ನಡಮೂಲೆ, ಸುರೇಶ್ ಸುಶಾ ತಿಂಗಳಾಡಿ, ಗೋಪಾಲ ಪೂಜಾರಿ ತಿಂಗಳಾಡಿ, ಜಗನ್ನಾಥ ಪೂಜಾರಿ ತ್ಯಾಗರಾಜೆ, ಜಿನ್ನಪ್ಪ ಪೂಜಾರಿ ಪಿದಪಟ್ಲ, ನಾರಾಯಣ ಪೂಜಾರಿ ನಂಜೆ, ಸಂದೇಶ್ ತಿಂಗಳಾಡಿ, ಭವಾನಿ ಜಿನ್ನಪ್ಪ ಪೂಜಾರಿ ಕುರಿಕ್ಕಾರ, ತುಷಾರ್ ಬೊಳೋಡಿ, ಅವಿನಾಶ್ ಬೊಳೋಡಿ, ಪ್ರಜ್ವಲ್ ನಿಡ್ಯಣ ಮೊದಲಾದವರು ಸಹಕಾರ ನೀಡಿದರು.










