ಡಾ. ಕಲಾಂರ ‘ಅಗ್ನಿಯ ರೆಕ್ಕೆಗಳು’ ಕನ್ನಡ ಕೃತಿ ಬಿಡುಗಡೆ – ರಾಜ್ಯಪಾಲರಿಂದ ಲೋಕಾರ್ಪಣೆ

0

ಪುತ್ತೂರು: ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ ‘Wings of Fire’ ಕೃತಿಯ ಕನ್ನಡ ಅನುವಾದ ‘ಅಗ್ನಿಯ ರೆಕ್ಕೆಗಳು’ ಪುಸ್ತಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಲೋಕಭವನದಲ್ಲಿ ಬಿಡುಗಡೆಗೊಳಿಸಿದರು.

ಕೆ. ಜಯಪ್ರಕಾಶ್ ರಾವ್ ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ, ಡಾ. ಕಲಾಂ ಅವರ ಜೀವನ ಸಾಧನೆ, ಚಿಂತನೆಗಳು ಮತ್ತು ರಾಷ್ಟ್ರ ನಿರ್ಮಾಣದ ದೃಷ್ಟಿಕೋನವನ್ನು ಕನ್ನಡ ಓದುಗರಿಗೆ ತಲುಪಿಸುವ ಮಹತ್ವದ ಪ್ರಯತ್ನವಾಗಿದೆ.ಈ ಸಂದರ್ಭ ಮಾತನಾಡಿದ ರಾಜ್ಯಪಾಲರು, “ಜನರ ರಾಷ್ಟ್ರಪತಿ ಎಂದು ಖ್ಯಾತರಾಗಿದ್ದ ಡಾ. ಕಲಾಂ ಸರಳತೆ, ವೈಜ್ಞಾನಿಕ ಸಾಧನೆ ಹಾಗೂ ರಾಷ್ಟ್ರಸೇವೆಯ ಮೂಲಕ ಇಂದಿಗೂ ಯುವಜನತೆಗೆ ಸ್ಫೂರ್ತಿ. ಅವರ ಜೀವನಾಧಾರಿತ ಕೃತಿಯನ್ನು ಕನ್ನಡದಲ್ಲಿ ಪ್ರಕಟಿಸುವುದು ರಾಜ್ಯದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ” ಎಂದರು.

ಕಾರ್ಯಕ್ರಮದಲ್ಲಿ ವಾಸನ್ ಪಬ್ಲಿಕೇಷನ್ಸ್‌ನ ರಘುನಾಥ್ ಹಾಗೂ ಶ್ರೀನಿವಾಸ್, ಎಚ್‌ಎಎಲ್ ಮಾಜಿ ಮುಖ್ಯ ವ್ಯವಸ್ಥಾಪಕ ಕೃಷ್ಣರಾವ್ ಉಪಸ್ಥಿತರಿದ್ದರು.

ಅನುವಾದಕರ ಪರಿಚಯ
ಕೃತಿಯನ್ನು ಅನುವಾದಿಸಿರುವ ಕೆ. ಜಯಪ್ರಕಾಶ್ ರಾವ್ ಮೂಲತಃ ಪುತ್ತೂರು ನಿವಾಸಿ ಹಾಗೂ ಫಿಲೋಮಿನಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ. ಎಡಿಎ ಮತ್ತು ಡಿಆರ್‌ಡಿಒ ಸಂಸ್ಥೆಗಳ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here