ಉಪ್ಪಿನಂಗಡಿ: ಕೂಟೇಲುವಿನಲ್ಲಿ ಲಾರಿ-ಕಾರು ಡಿಕ್ಕಿ – 5 ಮಂದಿಗೆ ಗಂಭೀರ ಗಾಯ

0

ಉಪ್ಪಿನಂಗಡಿ : ಇಲ್ಲಿನ ಕೂಟೇಲು ಎಂಬಲ್ಲಿ ಕಾರೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು, ಕಾರಿನಲ್ಲಿದ್ದ 5 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.


ಕಾರ್ಕಳದ ನಕ್ರೆ ಎಂಬಲ್ಲಿನ ಕುಟುಂಬವೊಂದರ ಸದಸ್ಯರು ಸುಬ್ರಹ್ಮಣ್ಯಕ್ಕೆ ವ್ಯಾಗನರ್ ಕಾರಿನಲ್ಲಿ ಯಾತ್ರೆ ಕೈಗೊಂಡಿದ್ದು, ಉಪ್ಪಿನಂಗಡಿಯ ಕೂಟೇಲು ಸಮೀಪ ಕಾರು ಸಂಚರಿಸುತ್ತಿದ್ದ ವೇಳೆ ಅಡುಗೆ ಅನಿಲದ ಜಾಡಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಕಾರಿನಲ್ಲಿದ್ದ ಚಾಲಕ ದೀಪಕ್ (45), ಯಾತ್ರಾರ್ಥಿಗಳಾಗಿದ್ದ ಗುರುರಾಜ್ (46), ಧನುಷ್ (15) , ಭಾರತಿ ( 48), ಗೀತಾ (55) ಎಂಬವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಲಾರಿ ಚಾಲಕ ದಾಮೋದರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.


ಘಟನೆ ಸಂಭವಿಸಿದಾಗ ಗಾಯಾಳುಗಳನ್ನು ನಜ್ಜುಗುಜ್ಜಾದ ಕಾರಿನಿಂದ ಹೊರಗೆಳೆಯುವಲ್ಲಿ ಸ್ಥಳೀಯರಾದ ಯು ಟಿ ಫಾಯಾಜ್, ವಿದ್ಯಾಧರ ಜೈನ್, ಝಕಾರಿಯಾ ಮತ್ತಿತರರು ಶ್ರಮಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here