ಮೀನಾಡಿ; ಕಾರು, ಟಿಟಿ ಡಿಕ್ಕಿ-ಪ್ರಯಾಣಿಕರಿಗೆ ಗಾಯ

0

ನೆಲ್ಯಾಡಿ: ಕಾರು ಹಾಗೂ ಟಿಟಿ ವಾಹನದ ನಡುವೆ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಮೇ 31ರಂದು ಬೆಳಗ್ಗೆ ನಡೆದಿದೆ.


ಕೊಂಬಾರು ಗ್ರಾಮದ ಕೊಡಂಕೇರಿ ನಿವಾಸಿ ಶರಣ್ ಹಾಗೂ ಅವರ ತಂದೆ ಸುಬ್ರಾಯ ಅವರು ಫೋರ್ಡ್ ಫೆನ್ಟೊ ಕಾರ್‌ನಲ್ಲಿ ಕೊಡಂಕೇರಿ ಮನೆಯಿಂದ ಇಚ್ಲಂಪಾಡಿ ಕಡೆಗೆ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದವರು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ತಿರುವು ರಸ್ತೆಗೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ಲೋಹಿತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಟಿಟಿ ವಾಹನ ಡಿಕ್ಕಿಯಾಗಿದೆ.

ಪರಿಣಾಮ ಕಾರು ಜಖಂಗೊಂಡಿದ್ದು ಕಾರ ಚಾಲಕ ಶರರ್ಣ, ಅವರ ತಂದೆ ಸುಬ್ರಾಯ, ಟಿಟಿ ವಾಹನದಲ್ಲಿದ್ದ ಪ್ರಯಾಣಿಕರಾದ ಚಿಕ್ಕಣ್ಣ, ಜಯಮ್ಮ, ಮಂಜುನಾಥ್ ಮತ್ತು ಇತರರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಾರು ಚಾಲಕ ಶರಣ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here