ನಾಟ್ಯರಂಗ ಪುತ್ತೂರಿನ ಋದ್ಧಿ ಎಂ ವಿ ದೂರದರ್ಶನದ ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆ

0

ಪುತ್ತೂರು: ಪುತ್ತೂರಿನ ನಾಟ್ಯರಂಗದ ವಿದ್ಯಾರ್ಥಿನಿ ಋದ್ಧಿ ಎಂ ವಿ ದೂರದರ್ಶನದ ಬಿ ಗ್ರೇಡ್ ಭರತನಾಟ್ಯ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ದೂರದರ್ಶನ ಕೇಂದ್ರ 2026 ಜನವರಿನಲ್ಲಿ ನಡೆಸಿದ ಭರತನಾಟ್ಯ ವಿಭಾಗದ ಆಡಿಶನ್ ಗೆ ಹಾಜರಾದ ಋದ್ಧಿ ಎಂ ವಿ ಅವರು ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.



ನಾಟ್ಯರಂಗದ ನೃತ್ಯಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಲ್ಲಿ ಕಳೆದ 5 ವರ್ಷಗಳಿಂದ ನೃತ್ಯಭ್ಯಾಸ ಮಾಡುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಋದ್ಧಿ ಎಂ ವಿ ದೂರದರ್ಶನ ಆಡಿಶನ್ ಗೆ ಹಾಜರಾಗಿದ್ದರು. ಸುಮಾರು 15 ವರ್ಷಗಳಿಂದ ಭರತನಾಟ್ಯ ಕಲಿಕೆಯನ್ನು ಪ್ರಾರಂಭಿಸಿ ತನ್ನ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ವತ್ ಪರೀಕ್ಷೆಯನ್ನು ಬರೆದಿರುತ್ತಾರೆ. ಇವರು ನೂರಕ್ಕೂ ಹೆಚ್ಚು ಸಮೂಹ ನೃತ್ಯ ಹಾಗೂ ಏಕ ವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಪುತ್ತೂರು ನೆಹರು ನಗರ ದ ನಿವೃತ್ತ ASI ವಿಜಯ ಕುಮಾರ್ ಹಾಗೂ ಶಾಂತಿ ದಂಪತಿಯ ಪುತ್ರಿಯಾದ ಇವರು ಪ್ರಸ್ತುತ ವಾಣಿಜ್ಯ ವಿಭಾಗದ ಪದವಿ ಯನ್ನು ಪೂರ್ಣಗೊಳಿಸಿ C A ಪರೀಕ್ಷೆಯ ತಯಾರಿಯಲಿದ್ದಾರೆ.

LEAVE A REPLY

Please enter your comment!
Please enter your name here