ಸ್ನಾಪ್‌ಚಾಟ್ ಲವ್: ಹುಡುಗಿಯಲ್ಲ ಹುಡುಗ ಎಂದು ತಿಳಿದಾಗ ರೂ.4.84 ಲಕ್ಷ ಮಾಯ

0

ಪುತ್ತೂರು: ಪುತ್ತೂರಿನ ವ್ಯಕ್ತಿಯೊಬ್ಬರಿಗೆ ಸ್ನಾಪ್‌ಚಾಟ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬರು ಹುಡುಗಿ ಎಂದು ಪರಿಚಯ ಮಾಡಿಕೊಂಡು ಸುಮಾರು ರೂ. 4.84,203 ಮೊತ್ತವನ್ನು ಖಾತೆಗೆ ಪಡೆದುಕೊಂಡು ವಂಚನೆ ಮಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.


ಪುತ್ತೂರು ನಿವಾಸಿಯೊಬ್ಬರು 2025 ನೇ ಡಿಸೆಂಬರ್ ತಿಂಗಳಿನಲ್ಲಿ ಸ್ನಾಪ್ ಚಾಟ್ ಮೂಲಕ ಅನ್ನಪೂರ್ಣಗೌಡ 26 ಎಂಬ ಹೆಸರಿನ ಸ್ನಾಪ್ ಚಾಟ್ ಐಡಿಯ ಅನ್ನಪೂರ್ಣ ಗೌಡ ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯು ಹುಡುಗಿ ಎಂಬುವುದಾಗಿ ಪರಿಚಯ ಮಾಡಿಕೊಂಡಿದ್ದರು. ಹುಡುಗಿಯ ಧ್ವನಿಯಲ್ಲಿ ಮಾತನಾಡಿ, ಮೆಸೇಜ್ ಮಾಡಿ ತಾನು ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು, ಬಳಿಕ ಅವರ ವಾಟ್ಸ್ ಆಪ್ ನಂಬರ್ ಕೂಡಾ ನೀಡಿ, ವಾಟ್ಸ್ ಆಪ್ ಮೂಲಕ ಪುತ್ತೂರಿನ ನಿವಾಸಿಯೊಬ್ಬರಲ್ಲಿ ಮಾತನಾಡುತ್ತಿದ್ದರು. ಆದರೆ ಅಪರಿಚಿತ ವ್ಯಕ್ತಿಯು 2026 ನೇ ಫೆಬ್ರವರಿ ತಿಂಗಳಿನಲ್ಲಿ ಎಪ್ರಿಲ್ ತಿಂಗಳಿನ ಅವಧಿಯಲ್ಲಿ ವಿವಿಧ ಹಣಕಾಸಿನ ತೊಂದರೆಗಳ ನೆಪವೊಡ್ಡಿ ಪುತ್ತೂರಿನ ನಿವಾಸಿಯಿಂದ ಒಟ್ಟು ರೂ. 4,84,203ಲಕ್ಷ ರೂ ಹಣವನ್ನು ಪಡೆದುಕೊಂಡಿದ್ದರು. ಬೆಳವಣಿಗೆಯಲ್ಲಿ ಪುತ್ತೂರಿನ ನಿವಾಸಿ ನಾನು ಹಣ ಹಾಕಿದ ಖಾತೆಯ ಬಗ್ಗೆ ತನ್ನ ಗೆಳೆಯರಲ್ಲಿ ತಿಳಿಸಿ ವಿಚಾರಿಸಿದಾಗ ಅದು ಹುಡುಗಿ ಅಲ್ಲ ಹುಡುಗ ಎಂಬುದಾಗಿ ತಿಳಿದು ಬೆಚ್ಚಿ ಬಿದ್ದಿದ್ದಾರೆ. ಇದೀಗ ತಾನು ಹುಡುಗಿ ಎಂದು ನಂಬಿಸಿ ಮೆಸೇಜ್ ಮುಖಾಂತರ ಮಾತನಾಡಿ ಲಕ್ಷಾಂತರ ಹಣ ಪಡೆದು ವಾಪಾಸು ನೀಡದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಪುತ್ತೂರಿನ ನಿವಾಸಿಯೊಬ್ಬರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here