ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂ.7ಕ್ಕೆ ಸಾಮೂಹಿಕ ಸರಸ್ವತಿ ವಂದನೆ, ವಿದ್ಯಾ ಸಂಕಲ್ಪ ಕಾರ್ಯಕ್ರಮ

0

ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಪುತ್ತೂರು ತಾಲೂಕು ಮತ್ತು ಗ್ರಾಮಾಂತರ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಜಂಟಿ ಆಯೋಜಕತ್ವದಲ್ಲಿ ಪ್ರಸಕ್ತ ವರ್ಷದ ಶಾಲಾ-ಕಾಲೇಜು ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ವಿದ್ಯೆ, ಸಂಸ್ಕಾರ ಹಾಗೂ ಏಕಾಗ್ರತೆಯ ಅಭಿವೃದ್ಧಿಗಾಗಿ “ಸಾಮೂಹಿಕ ಸರಸ್ವತಿ ವಂದನೆ” ಮತ್ತು “ವಿದ್ಯಾ ಸಂಕಲ್ಪ” ಕಾರ್ಯಕ್ರಮವು ದಿ. 07-06-2026ರ ಆದಿತ್ಯವಾರ ಬೆಳಿಗ್ಗೆ 9ರಿಂದ 11ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.

ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ ಕೋರ್ಟ್ ರಸ್ತೆ, ಅಟಲ್ ಉದ್ಯಾನ ಕೊಂಬೆಟ್ಟು, ಮಾಸ್ಟರ್ ಪ್ಲಾನರಿ ಕಲ್ಲೇಗ, ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾ ವಿಷ್ಣು ದೇವಸ್ಥಾನ ಕೆಮ್ಮಿಂಜೆ, ಶ್ರೀ ರಾಘವೇಂದ್ರ ಮಠ ಕಲ್ಲಾರೆ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವಿಶೇಷತೆಗಳು:ವಿದ್ಯಾ ಸಂಕಲ್ಪ: ವಿದ್ಯಾರ್ಥಿಗಳಿಂದ ಮಕ್ಕಳಿಂದ ಪುಸ್ತಕಕ್ಕೆ ಪುಷ್ಪಾರ್ಚನೆ,ಸರಸ್ವತಿ ಸೂಕ್ತ ಹವನ, ದೇವಳದ ವೈದಿಕರಿಂದ ನಡೆಯಲಿದೆ.

LEAVE A REPLY

Please enter your comment!
Please enter your name here