ಕಡಬ: ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

0

ಕಡಬ: ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಕಲಚೇತನರ ಇಲಾಖೆಯ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ಜೂ.5ರಂದು ನಡೆಯಿತು.

ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ. ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಕಡಬ ತಾಲೂಕು ಪಂಚಾಯತ್ ವಿಷಯ ನಿರ್ವಾಹಕಿ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.

ಸಭೆಯ ಪ್ರಮುಖ ನಿರ್ಣಯಗಳು:ಕಾರ್ಯಕರ್ತರ ಇ-ಹಾಜರಾತಿ ಪರಿಶೀಲಿಸಲಾಯಿತು. 2020-21 ರಿಂದ 2025-26ರ ವರೆಗಿನ 5% ಅನುದಾನದ ಮಾಹಿತಿ ನೀಡಲಾಯಿತು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಮಾಡಿಸಲು ಪ್ರಚಾರ ಪಡಿಸಲು ಸೂಚಿಸಲಾಯಿತು. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಗ್ರಾಮವಾರು ಅಂಕಿ ಅಂಶ ಸಂಗ್ರಹಿಸಲು ತಿಳಿಸಲಾಯಿತು. ಸೆರೆಬ್ರಲ್ ಪಾಲ್ಸಿ, ಆಟಿಸಂ, ಬೌದ್ಧಿಕ ವಿಕಲತೆ, ಬಹುವಿಧ ವಿಕಲತೆಯ 40% ಮೇಲ್ಪಟ್ಟವರಿಗೆ ನಿರಾಮಯ ಯೋಜನೆ ಬಗ್ಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಸೂಚನೆ ನೀಡಲಾಯಿತು.

ಬೆಳಂದೂರು ಗ್ರಾ.ಪಂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪ್ರಶಾಂತಿ ಆನಂದ ಗೌಡ ಸ್ವಾಗತಿಸಿದರು. ಗೋಳಿತೊಟ್ಟು ಗ್ರಾ.ಪಂ ಕಾರ್ಯಕರ್ತೆ ತುಳಸಿ ವಂದಿಸಿದರು. ತಾಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here