ಪೆರ್ನೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ : ಪುತ್ತೂರಿನ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

0

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮೇರೆಗೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ತೀರ್ಥಾಕ್ಷ (23) ಎಂಬಾತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಪ್ರಥಮ ಪಿಯುಸಿ ಓದುತ್ತಿರುವ ಈಕೆಯ ಪುತ್ರಿ ತಡರಾತ್ರಿ ಎದ್ದು ಮನೆಯಿಂದ ಹೊರಗೆ ಹೋಗುತ್ತಿದ್ದು, ಈ ಬಗ್ಗೆ ಮನೆಯವರು ಸಂಶಯಗೊಂಡು ವಿಚಾರಿಸಿದಾಗ ಮೂತ್ರಶಂಕೆಗೆಂದು ಹೇಳುತ್ತಿದ್ದಳು. ಪದೇ ಪದೇ ಇದೇ ಘಟನೆ ನಡೆದಾಗ ಮನೆಯವರು ಸಂಶಯಗೊಂಡು ಪರಿಶೀಲನೆ ನಡೆಸಿದಾಗ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ನಸುಕಿನ ಜಾವ ಸುಮಾರು ಮೂರರ ಸುಮಾರಿಗೆ ಅನುಮಾನಾಸ್ಪದ ವ್ಯಕ್ತಿಯೋರ್ವ ನಿಂತಿದ್ದು, ಅಲ್ಲಿಯೇ ಸ್ವಲ್ಪ ದೂರದಲ್ಲಿ ಈಕೆಯ ಮಗಳು ಕೂಡಾ ಕಂಡು ಬಂದಿದ್ದಳು.

ಈ ಬಗ್ಗೆ ಈಕೆಯಲ್ಲಿ ವಿಚಾರಿಸಿದಾಗ ನೇಮೋತ್ಸವವೊಂದರಲ್ಲಿ ತೀರ್ಥಾಕ್ಷ ಎಂಬಾತನ ಪರಿಚಯವಾಗಿದ್ದು, ಆತನ ಜೊತೆ ನಾನು ಪೋನ್ ಸಂಪರ್ಕದಲ್ಲಿದ್ದೆ. ಪರಸ್ಪರ ಪ್ರೀತಿಸುತ್ತಿದ್ದೇವೆ. ಆತ ಮನೆಯ ಹಿಂಬದಿ ಇರುವ ಖಾಲಿ ಜಾಗಕ್ಕೆ ಬರಲು ಹೇಳಿ ಮೇ 24 ರಂದು ರಾತ್ರಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಸಂತ್ರಸ್ತೆ ತಾಯಿ ತೀರ್ಥಾಕ್ಷನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 2026ರ ಫೆಬ್ರವರಿ 21 ರಿಂದ ಜೂನ್ 4 ಯ ಅವಧಿಯಲ್ಲಿ ಈತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈತ ನ ವಿರುದ್ದ 84/2026 ಕಲಂ: 4, 8 ,12 POCSO Act, ಕಲಂ: 64 ಬಿಎನ್‌ಎಸ್‌ 2023 & Sec 3(1)(w)(i)(ii), The SC & ST (Prevention of Atrocities) Amendment Act 2015 ಪ್ರಕಾರ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here