






ಪುತ್ತೂರು: ಭಾರತ್ ಕಟ್ಟಡ ಕಾರ್ಮಿಕರ ಸಂಘ (ರಿ) ಬೊಳುವಾರು ಪುತ್ತೂರು ಇದರ ಜೂನ್ ತಿಂಗಳ ಮಾಸಿಕ ಸಭೆ ಜೂ.7ರಂದು ಬೆಳಿಗ್ಗೆ 9:30 ಗಂಟೆಗೆ ಸಂಘದ ಕಚೇರಿಯಲ್ಲಿ ನಡೆಯಲಿದೆ.


ಸಭೆಯಲ್ಲಿ ಎಲ್ಲಾ ಕಾರ್ಮಿಕ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕಾಗಿ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.



ಸಭೆಯಲ್ಲಿ ಭಾರತ ಸರ್ಕಾರದ ಜನ ಸುರಕ್ಷಾ ಯೋಜನೆಗಳ ನವೀಕರಣ ಮತ್ತು ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮುಂತಾದ ಯೋಜನೆಗಳ ಬಗ್ಗೆ ವಿವರ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ










