“ಪುತ್ತೂರಿನ ಶುದ್ಧೀಕರಣ ನನ್ನ ಲೆವೆಲ್ನದ್ದಲ್ಲ” : ಹೇಳಿಕೆ ತಿರುಚಲಾಗಿದೆ ಡಿವಿಎಸ್ ಸ್ಪಷ್ಟನೆ

0

ಪುತ್ತೂರು: “ಪಕ್ಷ ಶುದ್ಧೀಕರಣ ವಿಚಾರದಲ್ಲಿ ಪುತ್ತೂರು ನನ್ನ ಲೆವೆಲ್ನದ್ದಲ್ಲ” ಎಂದು ಮಾಧ್ಯಮದ ಮುಂದೆ ನೀಡಿರುವ ಹೇಳಿಕೆಯನ್ನು ಅಪಾರ್ಥ ಬರುವ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಚಾರಿತ್ರ್ಯವಧೆ ಮಾಡುತ್ತಿರುವುದು ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಪಷ್ಟನೆ ನೀಡಿದ್ದಾರೆ.

“ನಿನ್ನೆಯ ದಿನ ಪುತ್ತೂರಿನ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ‘ಪಕ್ಷ ಶುದ್ಧೀಕರಣ’ದ ವಿಚಾರ ಬಂದಾಗ ಪುತ್ತೂರು ಬಿಜೆಪಿಯ ಬಗ್ಗೆ ಕೇಳಿದಾಗ ಅದು ನನ್ನ ಲೆವೆಲ್ನಲ್ಲಿ ಬರುವುದಿಲ್ಲ ಎಂದು ಹೇಳಿದ್ದೇನೆ. ಇದರ ಅರ್ಥ ನನ್ನ ಲೆವೆಲ್ನಿಂದ ಮೇಲ್ಪಟ್ಟದ್ದು. ನನ್ನ ಹಿರಿಯರು ಮಾಡಬೇಕೆ ಹೊರತು ನಾನಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.

“ಪುತ್ತೂರು ನನ್ನ ಪಕ್ಷದ ವಿಚಾರದಲ್ಲಿ ನಾನು ನಮ್ಮ ಹಿರಿಯರ ತೀರ್ಮಾನವೇ ನನ್ನ ತೀರ್ಮಾನ ಮತ್ತು ಅದಕ್ಕೆ ಬದ್ಧನಾಗಿರುತ್ತೇನೆ. ಕಳೆದ ಚುನಾವಣೆಯ ನಂತರ ಹಲವು ವೈರಿಗಳು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನನ್ನ ಮಾತನ್ನು ಅಪಾರ್ಥ ಬರುವ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಚಾರಿತ್ರ್ಯವಧೆ ಮಾಡುತ್ತಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ” ಎಂದರು.

“ರಾಜ್ಯಮಟ್ಟದಲ್ಲಿ ಈ ಶುದ್ಧೀಕರಣದ ಬಗ್ಗೆ ಮಾತನಾಡುತ್ತೇನೆ ಹೊರತು ಪುತ್ತೂರು ಮಟ್ಟಿಗೆ ಅಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನನಗೆ ಎಲ್ಲವನ್ನು ಕೊಟ್ಟ ನನ್ನ ಕರ್ಮ ಭೂಮಿ ಪುತ್ತೂರಿನ ಬಗ್ಗೆಯಾಗಲೀ, ಉನ್ನತ ಸ್ಥಾನಮಾನಗಳನ್ನು ಕೊಟ್ಟ ಪುತ್ತೂರು ಬಿಜೆಪಿ ಬಗ್ಗೆಯಾಗಲೀ ಅತ್ಯಂತ ಗೌರವದಿಂದ ಈ ಹಿಂದೆಯೂ ನಡೆದುಕೊಂಡಿದ್ದೇನೆ. ಮುಂದೆಯೂ ನನ್ನ ಕೊನೆಯುಸಿರು ಇರುವ ತನಕ ನಡೆದುಕೊಳ್ಳುತ್ತೇನೆ” ಎಂದು ಡಿ.ವಿ.ಸದಾನಂದ ಗೌಡ ಪತ್ರದ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here