ಟೀಮ್ ದಕ್ಷಿಣ ಕಾಶಿ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಆದೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಸಚಿನ್ ಎ.ಎಸ್ ಆಯ್ಕೆ

0

ಉಪ್ಪಿನಂಗಡಿ: ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರುತ್ತಿರುವ ಯುವ ಸಂಘಟನೆ ಟೀಮ್ ದಕ್ಷಿಣ ಕಾಶಿಯ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಪೆರಿಯಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ರವೀಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ತಿಮ್ಮಪ ಗೌಡ ಇಳಂತಿಲ, ಪ್ರಧಾನ ಕಾರ್ಯದರ್ಶಿಯಾಗಿ ಆದೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ಸಚಿನ್ ಎ.ಎಸ್, ಕಾನೂನು ಸಲಹೆಗಾರರಾಗಿ ಸಂದೇಶ್ ನಟ್ಟಿಬೈಲ್ ಆಯ್ಕೆಗೊಂಡರು.

ಸಭೆಯಲ್ಲಿ ಗಿರೀಶ್ ಆಚಾರ್ಯ, ಕಿಶೋರ್ ನೀರಕಟ್ಟೆ, ಸುನೀಲ್ ಅನಾವು, ರತನ್ ಕಟ್ಟೆಚ್ಚಾರ್, ಪವನ್ ಪನ್ನೋಟ್ಟು, ಪ್ರಶಾಂತ್ ನೆಕ್ಕಿಲಾಡಿ, ಮಹೇಶ್ ಬಜತ್ತೂರು, ಪ್ರಮೋದ್ ಅರ್ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here