






ಅಧ್ಯಕ್ಷ ಅನಿಲ್ ಮುಂಡೋಡಿ, ಕಾರ್ಯದರ್ಶಿ ದೇವಿಪ್ರಸಾದ್ ಉದಯಭಾಗ್ಯ


ಪುತ್ತೂರು: ಪರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ ನಡೆಯಲಿರುವ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅನಿಲ್ ಮುಂಡೋಡಿ ಆಯ್ಕೆಯಾಗಿದ್ದಾರೆ.



ಸಮಿತಿ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಪ್ರಭು ಉದಯಭಾಗ್ಯ ಹಾಗೂ ಖಜಾಂಜಿಯಾಗಿ ರವಿ ಕೋಡಿಮಜಲ್ ಇವರು ಆಯ್ಕೆಯಾಗಿದ್ದಾರೆ. ಸಮಿತಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ಗಣೇಶೋತ್ಸವ ಸಮಿತಿ ಬೆಳ್ಳಿ ಹಬ್ಬ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.










