







ಪುತ್ತೂರು; ಪುತ್ತೂರು ಶಾಸಕ ಅಶೋಕ್ ರೈ ಅವರ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದ ಕಾರಣ ಒಂದು ಹಂತದಲ್ಲಿ ನೂಕುನುಗ್ಗಲು ಮಟ್ಟಕ್ಕೆ ಮಂದಿದ್ದು ಕಚೇರಿ ಸಿಬಂದಿಗಳು ಜನರನ್ನು ನಿಯಂತ್ರಿಸಿದ ಘಟನೆ ನಡೆದಿದೆ.


ವಾರದ ಪ್ರತೀ ಸೋಮವಾರ ಶಾಸಕರು ಕಚೇರಿಯಲ್ಲಿ ಅಹವಾಲು ಸ್ವೀಕಾರ ಮಾಡುತ್ತಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಲು ಪುತ್ತೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಿಂದ ಸಾರ್ವಜನಿಕರು ಕಚೇರಿಗೆ ಭೇಟಿ ನೀಡುತ್ತಾರೆ.
ಕಂದಾಯ ಇಲಾಖೆ, ಅಕ್ರಮ ಸಕ್ರಮ, ಶಿಕ್ಷಣ, ಆರೋಗ್ಯ , ದಾರಿ ಸಮಸ್ಯೆ, ಸಾರ್ವಜನಿಕ ಅರ್ಜಿಗಳು ಸೇರಿದಂತೆ ಕೆಲವೊಂದು ವೈಯುಕ್ತಿಕ ವಿಚಾರಗಳನ್ನು ಶಾಸಕರ ಬಳಿ ಬಂದು ಇತ್ಯರ್ಥ ಮಾಡಿಕೊಂಡು ಹೋಗುತ್ತಾರೆ. ಕಚೇರಿಗೆ ಬರುವ ಸಾರ್ವಜನಿಕರ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಒದಗಿಸುತ್ತಾರೆ. ಸೋಮವಾರ ಮಧ್ಯಾಹ್ನದಿಂದ ಸಂಜೆ ತನಕ ಕಚೇರಿ ಜನಜಂಗುಳಿಯಿಂದ ತುಂಬಿದ್ದು ಎಲ್ಲರನ್ನೂ ಶಾಸಕರು ಸಂಯಮದಿಂದ ಮಾತನಾಡಿಸುತ್ತಿದ್ದರು.



ನನ್ನ ಕಚೇರಿಗೆ ನನ್ನನ್ನು ಭೇಟಿ ಮಾಡುವ ಪ್ರತೀಯೊಬ್ಬರನ್ನೂ ವೈಯುಕ್ತಿವಾಗಿ ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸುತ್ತೆನೆ. ನನ್ನಿಂದ ಇತ್ಯರ್ಥಪಡಿಸಲು ಸಾಧ್ಯವಾಗುವ ಎಲ್ಲಾ ವಿಚಾರಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡುತ್ತೇನೆ. ಸಂಜೆ 8 ರತನಕ ನಾನು ಸಾರ್ವಜನಿಕರಿಗಾಗಿಯೇ ಕಚೇರಿಯಲ್ಲಿ ಇರುತ್ತೇನೆ. ಎಷ್ಟೇ ಮಂದಿ ಸಾರ್ವಜನಿಕರು ಬಂದರೂ ಪ್ರತೀಯೊಬ್ಬರನ್ನೂ ಮಾತನಾಡಿಸುತ್ತೇನೆ
ಅಶೋಕ್ ರೈ ಶಾಸಕರು ಪುತ್ತೂರು










