ಬಡಗನ್ನೂರು ಸ‌.ಹಿ.ಪ್ರಾ.ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

0

ಬಡಗನ್ನೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರಿನಲ್ಲಿ ದಾನಿಗಳು ಕೊಡಮಾಡಿದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಶಾಲಾ ಅಭಿಮಾನ ಸಭಾಂಗಣದಲ್ಲಿ ಜೂ.6ರಂದು ನಡೆಯಿತು.

ಶಾಲೆಯ ಹಿರಿಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು ಹಾಗೂ ಕೊಡುಗೈ ದಾನಿ ನಾರಾಯಣ ರೈ ಕುದ್ಕಾಡಿಯವರು ಎಲ್.ಕೆ.ಜಿ.ಯಿಂದ 8ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಸುಮಾರು 25ಸಾವಿರ ರೂಪಾಯಿ ವೆಚ್ಚದಲ್ಲಿ ಉಚಿತ ನೋಟ್ ಪುಸ್ತಕವನ್ನು ವಿತರಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷೆ  ಸುಲೋಚನ ನೇರ್ಲಂಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಬ್ರಾಯ ನಾಯಕ್ ಮೇಗಿನಮನೆ,  ಶಾಲಾ ಮುಖ್ಯಗುರು ಕುಮಾರ್ ಕೆ ಜೆ ಉಪಸ್ಥಿತರಿದ್ದರು.

ಮುಖ್ಯ ಗುರು ಕುಮಾರ್ ಕೆ ಜೆ ಪ್ರಾಸ್ತಾವಿಕ ಮಾತನಾಡಿದರು. ಪದವೀಧರ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಧುಶ್ರೀ ವಂದಿಸಿದರು. ಶಿಕ್ಷಕಿಯರಾದ ಯಶಸ್ವಿನಿ,  ಲಕ್ಷ್ಮೀ, ಸರಿತಾ ಸಹಕರಿಸಿದರು. ಎಸ್ ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಮತ್ತು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಊರಿನ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಮೂಲಕ ಶಾಲೆಯನ್ನು  ಉಳಿಸಿ ಬೆಳೆಸುವ ಉದ್ದೇಶದಿಂದ ಹಾಗೂ ಸರಕಾರಿ ಶಾಲೆಗೆ ಬರುವ ಎಲ್ಲಾ ಮಕ್ಕಳು ಅತ್ಯಂತ ಬಡ ಕುಟುಂಬದವರಾಗಿದುದರಿಂದ ಅವರ ಕಲಿಕೆಗೆ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ನನಗೆ ಕೃಷಿ ಮೂಲದಿಂದ ಬರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಮಕ್ಕಳ ನೋಟ್ ಪುಸ್ತಕ ನೀಡಲು ಕಳೆದ ಕೆಲವು ವರ್ಷಗಳಿಂದ ನೀಡುತ್ತಾ ಬರುತ್ತಿದ್ದೇನೆ.
ನಾರಾಯಣ ರೖೆ ಕುದ್ಕಾಡಿ ಕಟ್ಟೆ

LEAVE A REPLY

Please enter your comment!
Please enter your name here