






ಪುತ್ತೂರು: ಸುಳ್ಯದ ಕುರುಂಜಿಭಾಗ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಸಂಧ್ಯಾರಶ್ಮಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಪ್ರಥಮ ಶಾಖಾ ಕಛೇರಿ ಈಶ್ವರಮಂಗಲದಲ್ಲಿ ಜೂ.೧೭ರಂದು ಉಧ್ಘಾಟನೆಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಈಶ್ವರಮಂಗಲ ಎಮ್.ಜಿ. ರೈ ಸಂಕೀರ್ಣದಲ್ಲಿ ನಡೆಯಿತು.


ಸಂಘದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಡಿ.ಎಚ್.ಒ ಡಾ.ಎಸ್.ರಂಗಯ್ಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಂಘದ ಉಪಾಧ್ಯಕ್ಷ ಎಮ್. ವಿಶ್ವನಾಥ ನಾಯರ್, ಈಶ್ವರಮಂಗಲ ಶಾಖೆಯ ಸಲಹ ಸಮಿತಿ ಉಪಾಧ್ಯಕ್ಷರಾದ ಎಸ್. ಶಂಕರ್ ಪಾಟಾಳಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ನಿರ್ದೇಶಕರಾದ ಕೆ.ಆರ್. ಚಂದ್ರಹಾಸ, ಬಾಬು ಗೌಡ ಎ., ಕೇಶವ ಸಿ.ಎ, ಶ್ರೀಧರ ನಾಯ್ಕ ಪಿ., ರಾಮಚಂದ್ರ ಪಿ., ಸಲಹಾ ಸಮಿತಿಯ ಸದಸ್ಯರುಗಳಾದ ಮೋಹನಾಂಗಿ ಕೆ., ಪೂರ್ಣಚಂದ್ರ ರೈ, ಪ್ರವೀಣ್ ನೀರಳಿಕೆ, ಕೇಶವ ಕೋರಿಗದ್ದೆ, ಪದ್ಮನಾಭ ಮಡ್ಯಲಮಜಲು, ವಸಂತಿ, ಪ್ರೇಮಲತಾ ಎ. ಹೆಚ್., ಯೊಗೀಶ ಕೆ. ಉಪಸ್ಥಿತರಿದ್ದರು.



ಈಶ್ವರಮಂಗಲ ಶಾಖೆಯ ಸಲಹ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಎ., ಸ್ವಾಗತಿಸಿ ಸಿಬ್ಬಂದಿ ಧನ್ಯಶ್ರೀ ಕೆ. ವಂದಿಸಿದರು. ದೇವದಾಸ್ ಕೂಜಿಕೋಡ್ ಸಿಬ್ಬಂದಿ ಅನಿಲ್ ಕುಮಾರ್ ಎನ್. ವಿ. ಉಪಸ್ಥಿತರಿದ್ದರು.










