






ಉಪ್ಪಿನಂಗಡಿ : ಬಜತ್ತೂರು ಗ್ರಾಮದ ಪುಣಿಕೆದಡಿ ಮನೆ ನಿವಾಸಿ ವಸಂತ ಗೌಡ (48) ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಬುಧವಾರ ಸಂಭವಿಸಿದೆ.


ಅವರು ಜೂನ್.4 ರಂದು ವಿಷ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಮೃತಪಟ್ಟರೆಂದು ತಿಳಿಸಲಾಗಿದೆ.



ಮೃತ ವಸಂತ ಗೌಡ ವಿವಾಹಿತನಾಗಿದ್ದು ಪತ್ನಿ ಹಾಗೂ ಒರ್ವ ಮಗನನ್ನು ಹೊಂದಿದ್ದು, ಮದ್ಯ ಸೇವಿಸಿ ಬಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಕಾರಣಕ್ಕೆ ಹತ್ತು ವರ್ಷದ ಹಿಂದೆಯೇ ಪತ್ನಿ ಮಗನನ್ನು ಕರೆದುಕೊಂಡು ತವರು ಮನೆಯನ್ನು ಸೇರಿದ್ದು, ಬಳಿಕ ಒಂಟಿಯಾಗಿ ಜೀವನ ನಡೆಸುತ್ತಿದ್ದು ಜೀವನದಲ್ಲಿ ಬೇಸರಗೊಂಡು ಈ ಕೃತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.










