ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

0

ಪುತ್ತೂರು: ಸಂಪ್ಯ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಫ್ಯಾಟಿ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ, ನೇತ್ರ ತಪಾಸಣಾ ಶಿಬಿರ, ಬಂಜೆತನ ತಪಾಸಣೆ ಹಾಗೂ ರಕ್ತದಾನ ಶಿಬಿರ ಜೂ.11ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಡ್‌ಲ್ಯಾಂಡ್ ಫೌಂಡೇಶನ್‌ನ ಸಂಸ್ಥಾಪಕರು ಹಾಗೂ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್‌ಮೆನ್ ಡಾ.ಅಶ್ರಫ್ ಎಸ್ ಕಮ್ಮಾಡಿ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಬಂಟರ ಮಾತೃ ಸಂಘದ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಪುತ್ತೂರಿನ ಅಭಿವೃದ್ಧಿಗೆ ಮೆಡ್‌ಲ್ಯಾಂಡ್ ಆಸ್ಪತ್ರೆ ದಿಕ್ಸೂಚಿ ಆಗಿದ್ದು ಕೇವಲ ವ್ಯವಹಾರಿಕ ದೃಷ್ಟಿಕೋನ ಇಟ್ಟುಕೊಳ್ಳದೆ ಇಂತಹ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದರು.

ಸನ್ಮಾನ:
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲಾಗಿರುವ ಬಿ ವಿ ಸೂರ್ಯನಾರಾಯಣ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ರ್‍ಯಾಂಕ್ ಪಡೆದ ಪ್ರಸಾದ್ ನೇತ್ರಾಲಯ ಪುತ್ತೂರು ಇದರ ಕಣ್ಣಿನ ತಜ್ಞ ಡಾ.ವಿಷ್ಣುಪೂಜಾ ಅವರನ್ನು ಸನ್ಮಾನಿಸಲಾಯಿತು.

ಏಕಕಾಲದಲ್ಲಿ 4 ಶಿಬಿರ:
ಫ್ಯಾಟಿ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ, ನೇತ್ರದಾನ ಶಿಬಿರ, ಬಂಜೆತನ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಏಕಕಾಲದಲ್ಲಿ ಬಹಳ ಯಶಸ್ವಿಯಾಗಿ ನಡೆದಿದ್ದು ಸುಮಾರು 500 ಕ್ಕಿಂತಲೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ವೇದಿಕೆಯಲ್ಲಿ ಮೆಡ್‌ಲ್ಯಾಂಡ್ ಸ್ಪೆಷಲಿಟಿ ಆಸ್ಪತ್ರೆಯ ಮೆಡಿಕಲ್ ಸುಪರಿಂಡೆಂಟ್ ಡಾ.ವಿಶಾಲ್ ಯು ಪಿ, ಎಲುಬು ಮತ್ತು ಕೀಲು ತಜ್ಞ ಡಾ.ನಂದಕಿಶೋರ್ ಭಟ್, ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಇದರ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಸಿಝ್ಲರ್ ಗ್ರೂಪ್‌ನ ಪ್ರಸನ್ನಕುಮಾರ್ ಶೆಟ್ಟಿ, ತಾಲೂಕು ಕೃ.ಉ. ಸಹಕಾರಿ ಮಂಡಳಿ ನಿರ್ದೇಶಕ ಅಶ್ರಫ್ ಕಲ್ಲೇಗ ಉಪಸ್ಥಿತರಿದ್ದರು. ಮೆಡ್‌ಲ್ಯಾಂಡ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಬ್ದುಲ್ ರಝಾಕ್ ಸಾಲ್ಮರ ಸ್ವಾಗತಿಸಿದರು. ಆಸ್ಪತ್ರೆಯ ಪಿಸಿಸಿ ಅಖಿಲ್ ವೈ ವಂದಿಸಿದರು. ಆಸ್ಪತ್ರೆಯ ಪಿಸಿಸಿ ರಫೀಕ್ ಎಂ.ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here