ಸೋರುವ ಮನೆಗೆ ಬಿಜೆಪಿ ಬೂತ್ ಸಮಿತಿಯ ಟಾರ್ಪಲ್ ಆಸರೆ: ಆರ್ಯಾಪು ದಂಬೆತ್ತಿಮಾರ್‌ನಲ್ಲಿ ಮಾನವೀಯ ಸ್ಪಂದನೆ

0

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರಿನ ಕಡುಬಡವ ಮುದರ ಎಂಬವರ ಕುಟುಂಬಕ್ಕೆ ಬಿಜೆಪಿ ಕಾರ್ಯಕರ್ತರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮನೆಯ ಛಾವಣಿ ತೀರಾ ಶಿಥಿಲಾವಸ್ಥೆಯಲ್ಲಿದ್ದು ಮಳೆ ನೀರು ಸೋರುತ್ತಿದ್ದ ಮುದರ ಅವರ ಮನೆಗೆ ಬಿಜೆಪಿ 112ನೇ ಬೂತ್ ಸಮಿತಿಯಿಂದ ಜೂ.14ರಂದು ಮನೆಯ ಮಾಡಿಗೆ ಟಾರ್ಪಲ್ ಹೊದಿಸಲಾಯಿತು.


ಮುದರ ಅವರ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಮಳೆಗಾಲದಲ್ಲಿ ಸೋರುತ್ತಿದ್ದ ಮನೆಯಲ್ಲೇ ವಾಸಿಸುವುದು ಕಷ್ಟಕರವಾಗಿತ್ತು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ತಕ್ಷಣವೇ ಸ್ಪಂದಿಸಿ, ಸೋಲಾರ್ ಟಾರ್ಪಲ್ ಹೊದಿಸುವ ಮೂಲಕ ಕುಟುಂಬಕ್ಕೆ ಆಸರೆಯಾದರು.


ಈ ಜನಸೇವಾ ಕಾರ್ಯದಲ್ಲಿ ಬೂತ್ ಅಧ್ಯಕ್ಷ ಸಂತೋಷ್ ಸುವರ್ಣ ಮೇರ್ಲ, ಶಕ್ತಿಕೇಂದ್ರದ ಅಧ್ಯಕ್ಷ ನವೀನ್ ರೈ ಒಳತಡ್ಕ, ಅರ್ಯಾಪು ಗ್ರಾಮಪಂಚಾಯತ್ ಮಾಜಿ ಸದಸ್ಯರುಗಳಾದ ಜಯಂತ್ ಶೆಟ್ಟಿ ಕಂಬಳತಡ್ಡ, ವಿನಯ್ ನಾಯ್ಕ್ ಕೋಟ್ಲಾರ್, ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಡಿ ಕಾರ್ಪಾಡಿ, ನಿಕಟ ಪೂರ್ವ ಬೂತ್ ಅಧ್ಯಕ್ಷರಾದ ನಾಗೇಶ್ ಕಂಬಳತಡ್ಡ, ಕೃಷ್ಣಪ್ಪ ಗೌಡ ಅಡ್ಕ, ರಂಜನ್ ಸುವರ್ಣ ಮೇರ್ಲ, ವಿಜೇತ್ ಬಂಗೇರ ಮೇರ್ಲ ಉಪಸ್ಥಿತರಿದ್ದರು.


ರೋಹಿತ್ ಕಾರ್ಪಾಡಿ, ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ದ, ಕಾರ್ಯದರ್ಶಿ ಧನುಷ್ ಹೊಸಮನೆ,ಬೂತ್ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಮೇರ್ಲ,ಆರ್ಯಾಪು ಗ್ರಾಮಪಂಚಾಯತ್ 4ನೇ ವಾರ್ಡಿನ ನಿಕಟಪೂರ್ವ ಸದಸ್ಯರೂ ಆರ್ಯಾಪು ಶಕ್ತಿಕೇಂದ್ರದ ಪ್ರಭಾರಿಯೂ ಆಗಿರುವ ಯತೀಶ್ ದೇವ ಸಂಟ್ಯಾರ್, ಗಣೇಶ್ ಆಚಾರ್ಯ ಅರ್ಯಾಪು ಹಾಗೂ ಮತ್ತಿತರ ಹಲವಾರು ಬೂತ್ ಸಮಿತಿ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here