






ಕಾಣಿಯೂರು: ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎಕ್ಸಲೆಂಟ್ ಸ್ಪೋರ್ಟ್ಸ್ ಯೋಗ ಅವಾರ್ಡ್ ಗೆ ಕಡಬ ತಾಲೂಕಿನ ಏನೇಕಲ್ ಅಕ್ಷಯ ಬಾಬ್ಲುಬೆಟ್ಟು ಆಯ್ಕೆಯಾಗಿದ್ದಾರೆ.


ಯೋಗಾಸನದಲ್ಲಿ 6 ಬಾರಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸ್ಪರ್ಧೆಯಲ್ಲಿ 12 ಚಿನ್ನದ ಪದಕ ಸೇರಿದಂತೆ 2 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದುಕೊಂಡಿದ್ದು, ಇವರು ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಇದರ ಆಧಾರದಲ್ಲಿ ಈ ಅವಾರ್ಡ್ ಗೆ ಆಯ್ಕೆ ಮಾಡಲಾಗಿದೆ. ಈಕೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಡಬ ತಾಲೂಕಿನ ಏನೇಕಲ್ ನಿವಾಸಿ ಮೋಹನ್ ಕುಮಾರ್ ಮತ್ತು ದಿವ್ಯ ಕುಮಾರಿ ರವರ ಪುತ್ರಿ. ನಿರಂತರ ಯೋಗ ಕೇಂದ್ರ ಏನೇಕಲ್ ನಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಯೋಗ ಶಿಕ್ಷಣವನ್ನು ಪಡೆಯುತ್ತಿದ್ದಾರೆ.













