ಡೈವಿಂಗ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಂದನ್ ನಾೖಕ್ ಗೆ ಶಾಸಕರಿಂದ ಸನ್ಮಾನ

0

ಪುತ್ತೂರು: ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ನಡೆಸಿದ ಎನ್‌ಆರ್‌ಐ ರಾಜ್ಯಮಟ್ಟದ ಸೀನಿಯರ್ ಡೈವಿಂಗ್ ಚಾಂಪಿಯನ್‌ಶಿಪ್ 2026-27ರಲ್ಲಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿಯನ್ನು ಪ್ರತಿನಿಧಿಸಿದ ನಂದನ್ ನಾೖಕ್ ಹೈ ಬೋರ್ಡ್ ಡೈವಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ 3 ಮೀ. ಸ್ಪ್ರಿಂಗ್ ಬೋರ್ಡ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಂದನ್ ನಾೖಕ್ ಅವರನ್ನು ಜೂ.15ರಂದು ಶಾಸಕರ ಕಚೇರಿಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನಂದನ್ ಅವರ ತಂದೆ, ನೆಹರುನಗರದ ಜೀವ ಮೆಡಿಕಲ್ ಮಾಲಕ ರವಿಸಂಪತ್ ನಾೖಕ್, ನಗರ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here