







ಕೆಯ್ಯೂರು:ಪ್ರಗತಿಪರ ಕೃಷಿಕರಾಗಿದ್ದ ಕೆಯ್ಯೂರು ನಿವಾಸಿ ಮಹಾಲಿಂಗ ಶೆಟ್ಟಿ(92ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಜು.೧೭ರಂದು ರಾತ್ರಿ ಕೆಯ್ಯೂರಿನಲ್ಲಿ ಮಗನ ಮನೆಯಲ್ಲಿ ನಿಧನರಾದರು.


ಮೃತರು ಪತ್ನಿ ಚಿತ್ರಾವತಿ,ಪುತ್ರರಾದ ಬಿಕೆಟಿ ಕಂಪೆನಿಯ ಡಿ.ಜಿ.ಎಂ ಸುಧಾಕರ ಶೆಟ್ಟಿ,ಕೆಯ್ಯೂರು ಶ್ರೀದೇವಿ ಕ್ಲಿನಿಕ್ನ ವೈದ್ಯರಾದ ಡಾ.ಶಿವಪ್ರಸಾದ್ ಶೆಟ್ಟಿ,ಪುತ್ರಿ ರೇಖಾ ಹೆಗ್ಡೆ,ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.



ಜೂ.18ರಂದು ಅಂತ್ಯಕ್ರಿಯೆ:
ಮೃತರ ಅಂತಿಮ ಕ್ರಿಯೆಯು ಜೂ.18ರಂದು ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಲ್ಲಿ ನಡೆಯಲಿದೆ ಎಂದು ಪುತ್ರ ಡಾ.ಶಿವಪ್ರಸಾದ್ ಶೆಟ್ಟಿ, ತಿಳಿಸಿದ್ದಾರೆ










