






ಮೂರನೇ ಸಂಚಿಕೆಯ ವಿಜೇತರಿಗೆ ಬಹುಮಾನ ವಿತರಣೆ
ಜೂ.19ರಂದು ನಾಲ್ಕನೇ ಸಂಚಿಕೆ


ಪುತ್ತೂರು: ಮಂಗಳೂರು ಜ್ಯುವೆಲ್ಸ್ ಪುತ್ತೂರು ಶಾಖೆ ವತಿಯಿಂದ ‘ಸುದ್ದಿ’ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ‘ಗೆಸ್ ಮಾಡಿ-ಪ್ರೈಝ್ ಗೆಲ್ಲಿ’ ಕಾರ್ಯಕ್ರಮದ ಮೂರನೇ ಸಂಚಿಕೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.



ಕಾರ್ಯಕ್ರಮದಲ್ಲಿ ತೋರಿಸಲಾದ ಆಭರಣದ ನಿಖರ ತೂಕ ಮತ್ತು ಮೌಲ್ಯವನ್ನು ಸಮೀಪದಿಂದ ಊಹಿಸಿ ವಿಜೇತರಾದ ಜಯಶ್ರೀ ಬೀರಮಲೆ ಅವರಿಗೆ ಮಂಗಳೂರು ಜ್ಯುವೆಲ್ಸ್ ನ ಸಂದೀಪ್ ರೈ ಅವರು ಆಕರ್ಷಕ ಉಡುಗೊರೆ ನೀಡಿ ಅಭಿನಂದಿಸಿದರು.
ಗೆಸ್ ಮಾಡಿ-ಪ್ರೈಝ್ ಗೆಲ್ಲಿ ಕಾರ್ಯಕ್ರಮವು ಪ್ರತೀ ಶುಕ್ರವಾರ ಸಂಜೆ 6.30ಕ್ಕೆ ಸುದ್ದಿ ಕೇಬಲ್ ಚಾನೆಲ್ ಹಾಗೂ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗುತ್ತಿದೆ. ವೀಕ್ಷಕರು 8147916465 ಸಂಖ್ಯೆಗೆ ಕರೆ ಮಾಡಿ ಆಭರಣದ ಅಂದಾಜು ತೂಕ ಮತ್ತು ಬೆಲೆ ತಿಳಿಸಿ ಬಹುಮಾನ ಗೆಲ್ಲಬಹುದಾಗಿದೆ. ಕಾರ್ಯಕ್ರಮದ ನಾಲ್ಕನೇ ಸಂಚಿಕೆ ಜೂ.19ರಂದು ಪ್ರಸಾರವಾಗಲಿದೆ.










