ಕನ್ಯಾನ: ಟಿಪ್ಪರ್ ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು

0

ವಿಟ್ಲ: ಟಿಪ್ಪರ್ ಲಾರಿಯೊಂದು ತನ್ನಿಂತಾನೆ ಚಲಿಸಿದ ಪರಿಣಾಮವಾಗಿ ಅದರ ಚಾಲಕ ಚಕ್ರದಡಿಗೆ ಸಿಲುಕಿ‌ ಧಾರುಣವಾಗಿ ಮೃತಪಟ್ಟ ಘಟನೆ ಜೂ.18ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ನಡೆದಿದೆ.

ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್‌ ಎಂದು ಗುರುತಿಸಲಾಗಿದೆ.


ಜೂ.18ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಘಟನೆ ನಡೆದಿದೆ. ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿಂದ ಬೃಹದಾಕಾರದ ಲಾರಿಗಳಲ್ಲಿ ಹೊರರಾಜ್ಯಕ್ಕೆ ಮಣ್ಣು ಸಾಗಾಟ ನಡೆಯುತ್ತಿತ್ತು. ಅಲ್ಲಿನ ವೇಸ್ಟ್ ಮಣ್ಣುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮಹೇಶ್ ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯನ್ನು ತರಲಾಗಿತ್ತು. ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಾಲಕ‌ ಮಹೇಶ್ ರವರು ಲಾರಿಯನ್ನು ನಿಲ್ಲಿಸಿ ಅದರಡಿಗೆ ಹೋಗಿ ಸರಿಪಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು‌. ಈ‌ ವೇಳೆ ಒಮ್ಮೆಲೆ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ಲಾರಿ ಚಾಲಕ ಮಹೇಶ್ ಮುಂದಿನ ಚಕ್ರದಡಿಗೆ ಸಿಲುಕಿ ಧಾರುಣವಾಗಿ ಮೃತಪಟ್ಟಿದ್ದಾರೆ.


ಘಟನೆ ನಡೆದ ಕೂಡಲೇ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿ ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here