ವಿಷನ್ ಐ ಕೇರ್ ಅಪ್ಟಿಕಲ್ಸ್ ನ 3ನೇ ಶಾಖೆ ಜೂ.21ರಂದು ಶುಭಾರಂಭ

0

ಉಪ್ಪಿನಂಗಡಿ: ಕಳೆದ ಆರು ವರ್ಷಗಳಿಂದ ನಿರಂತರ ಸೇವೆಯೊಂದಿಗೆ ಮೆಚ್ಚುಗೆಗೆ ಪಾತ್ರವಾಗಿರುವ ಕಣ್ಣಿನ ಪರೀಕ್ಷಾ ಕೇಂದ್ರ ವಿಷನ್ ಐ ಕೇರ್ ಅಪ್ಟಿಕಲ್ಸ್ ನ 3ನೇ ಶಾಖೆ ಜೂ.21ರಂದು ಹುಟ್ಟೂರಾದ ಉಪ್ಪಿನಂಗಡಿಯಲ್ಲಿ ಆರೋಗ್ಯ ಮೆಡಿಕಲ್ಸ್ ಹತ್ತಿರದ ವೆಂಕಟರಮಣ ಪ್ರಸಾದ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


ಮಾಜಿ ಶಾಸಕ ಸಂಜೀವ ಮಠಂದೂರು ಅವರು ಈ ಶಾಖೆಯನ್ನು ಉದ್ಘಾಟಿಸಲಿದ್ದು, ಪುತ್ತೂರು ಮಹಾವೀರ ಆಸ್ಪತ್ರೆಯ ನೇತ್ರ ತಜ್ಞೆ ಡಾ| ಆಶಾಜ್ಯೋತಿ ಪುತ್ತೂರಾಯ, ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ಡಾ| ನಿರಂಜನ್ ರೈ, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ.ರಾಧಾ ಅವರು ದೀಪ ಪ್ರಜ್ವಲಿಸಲಿದ್ದಾರೆ.


ಪುತ್ತಿಲರ ಪರಿವಾರ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಇಂದ್ರಪ್ರಸ್ಥ ವಿದ್ಯಾಲಯದ ಚಾಲಕ ಕರುಣಾಕರ ಸುವರ್ಣ, ದಂತ ವೈದ್ಯ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ|ರಾಜಾರಾಮ್ ಕೆ.ಬಿ., ರೋಟರಿ ಕ್ಲಬ್ ಉಪ್ಪಿನಂಗಡಿ ಸ್ಥಾಪಕಾಧ್ಯಕ್ಷ ಅಝೀಝ್ ಬಸ್ತಿಕಾರ್, ವಾಣಿಜ್ಯ ಕೈಗಾರಿಕಾ ಸಂಘ ಉಪ್ಪಿನಂಗಡಿ ಅಧ್ಯಕ್ಷ ಪ್ರಶಾಂತ್ ಡಿ’ಕ್ರಾಸ್ತ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಬೆತ್ತೋಡಿ, ನೇತ್ರಾವತಿ ಆಟೋ ಚಾಲಕ ಮಾಲಕರ ಘದ ಅಧ್ಯಕ್ಷ ಫಾರೂಕ್ ಝಿಂದಗಿ, ಕಟ್ಟಡ ಮಾಲಕರಾದ ರಾಘವೇಂದ್ರ ಪ್ರಭು, ವಿವೇಕಾನಂದ ಪ್ರಭು, ಭಟ್ ನರ್ಸಿಂಗ್ ಹೋಮ್ ನ ಡಾ| ಕೆ.ಜಿ.ಭಟ್, ಶೆಣೈ ನರ್ಸಿಂಗ್ ಹೋಮ್ ನ ಹಿರಿಯ ವೈದ್ಯ ಡಾ| ಎಂ.ಆರ್.ಶೆಣೈ, ಮಕ್ಕಳ ತಜ್ಞ ಡಾ|ಎಂ.ಎನ್.ಭಟ್, ವೈದ್ಯ ಡಾ|ಶೌರಿ ರೈ, ಸಂಜೀವಿನಿ ಕ್ಲಿನಿಕ್ ನ ಡಾ|ಗೋವಿಂದ ಪ್ರಸಾದ್ ಕಜೆ, ಪದ್ಮ ಕ್ಲಿನಿಕ್ ನ ಡಾ|ಯತೀಶ್ ಶೆಟ್ಟಿ, ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ| ರಮ್ಯಾ ರಾಜಾರಾಮ್, ಧನ್ವಂತರಿ ಹಾಸ್ಪಿಟಲ್ ನ ಡಾ| ಸುಪ್ರಿತಾ ನಿರಂಜನ್ ರೈ, ಆಯುರ್ವೇದ ತಜ್ಞ ಡಾ| ಶೃತಿ ಪಾರ್ವತಿ ಕೈಲಾರ್, ಮಾಣಿ ಪದ್ಮಾ ಕ್ಲಿನಿಕ್ ನ ಡಾ| ಶ್ರೀನಾಥ್ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here