ರಸ್ತೆ ಉದ್ಘಾಟನೆ : ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ 57 ಕೋ.ರೂ. – ಕ್ಯಾ. ಬ್ರಿಜೇಶ್ ಚೌಟ

0

ಉಪ್ಪಿನಂಗಡಿ: ದ.ಕ. ಜಿಲ್ಲೆಯ ರಸ್ತೆ ಅಭಿವೃದ್ಧಿ ಸಲುವಾಗಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಕೇಂದ್ರ ಸರಕಾರದಿಂದ 57 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದನ್ನು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.


ಉಪ್ಪಿನಂಗಡಿ ಬಳಿಯ ನಂದಿನಿನಗರದಲ್ಲಿ 5 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಜೂ.18ರಂದು ಉದ್ಘಾಟಿಸಿ ಮಾತನಾಡಿದ ಅವರು, ಪ್ರದೇಶಾಭಿವೃದ್ಧಿ ನಿಧಿ ಅಲ್ಲದೆ ಮಳೆಹಾನಿ ನಿಧಿಯಲ್ಲಿ 80 ಕೋಟಿ ರೂ. ಅನುದಾನ ಬಂದಿದೆ. ಇವೆರಡನ್ನೂ ಬಳಸಿಕೊಂಡು ಜಿಲ್ಲೆಯ ಲೋಕೋಪಯೋಗಿ ರಸ್ತೆಗೆ ಮತ್ತು ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ರಸ್ತೆಗಳಿಲ್ಲದೆ ಜನರು ಪರದಾಡುವ ಸ್ಥಿತಿ ಬಂದೊದಗಿದೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವಾಗ ಅನುದಾನಕ್ಕೆ ಕೊರತೆಯಿರಲಿಲ್ಲ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2 ಸಾವಿರ ಕೋ.ರೂ.ನಷ್ಟು ಅನುದಾನ ನೀಡಿತ್ತು ಎಂದರಲ್ಲದೆ, ಇಲ್ಲಿನವರದ್ದು ರಸ್ತೆಯ ಇನ್ನಷ್ಟು ಬೇಡಿಕೆಯಿದೆ ಅದನ್ನು ಮುಂದಿನ ದಿವಸಗಳಲ್ಲಿ ಜೋಡಿಸಿಕೊಳ್ಳೋಣ ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಂಯೋಜಕ ಪ್ರಸನ್ನ ದರ್ಬೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೊಟ್ಟೆ, ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್., ವಿರೂಪಾಕ್ಷ ಭಟ್, ವಿದ್ಯಾಧರ ಜೈನ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಬಿಜೆಪಿ ಮುಖಂಡರಾದ ರಾಮಚಂದ್ರ ಮಣಿಯಾಣಿ, ಎನ್. ಉಮೇಶ್ ಶೆಣೈ, ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ ಬಪ್ಪಳಿಗೆ, ಪುನೀತ್ ಮಾಡತ್ತಾರು, ಮುಕುಂದ ಬಜತ್ತೂರು, ಉಷಾ ಚಂದ್ರ ಮುಳಿಯ, ಶಿಶೀರ್ ಪೆರೋಡಿ, ರಾಜೇಶ್ ರೈ ಪರ್ಪುಂಜ, ಮಹೇಶ್ ಕೇರಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೋಹನ್ ಪಕ್ಕಳ, ಸದಾನಂದ ನೆಕ್ಕಿಲಾಡಿ, ಮಂಜುನಾಥ ಶೆಣೈ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಹರಿರಾಮಚಂದ್ರ, ಶ್ರೀಮತಿ ರಾಧಾ, ನಿತಿನ್ ಸದಾನಂದ ಶೆಟ್ಟಿ, ಚಂದ್ರಾವತಿ, ಲಕ್ಷ್ಮೀಶ, ದಯಾನಂದ ಸರೋಳಿ, ನಾರಾಯಣ, ಕೃಷ್ಣಪ್ಪ, ನಾರಾಯಣ, ಲಕ್ಷ್ಮೀಶ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here