







ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗುವ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಶಾಸಕರು ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.


ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಸುದ್ದಿ ಸಿಎಂ ಪ್ರಮಾಣ ವಚನದ ವೇಳೆ ಹರಡಿತ್ತು. ಮೊದಲ ಹಂತದ ಸಚಿವರ ಪಟ್ಟಿಯಲ್ಲಿ ಅವಕಾಶ ಸಿಗುತ್ತದೆ ಎಂದು ನಂಬಲಾಗಿತ್ತು. ಸಚಿವ ಸ್ಥಾನ ಸಿಗಲಿ ಎಂದು ಸರ್ವ ಧರ್ಮೀಯರೂ ದೇವರ ಮೊರೆ ಹೋಗಿದ್ದರು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಕೆಲವೇ ದಿನದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಈ ನಡುವೆ ಶಾಸಕರಿಗೆ ದೆಹಲಿಯಿಂದ ಬುಲಾವ್ ಬಂದಿದೆ. “ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ, ಆದರೆ ಅಶೋಕ್ ರೈ ಅವರು ಸಚಿವ ಪಟ್ಟ ಏರಲು ಒಂದೇ ಮೆಟ್ಟಿಲು ಬಾಕಿ” ಎಂದು ಕೆಲವು ಆಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ.



ಅಶೋಕ್ ರೈ ಸಚಿವರಾದರೆ ಪುತ್ತೂರು ಪೂರ್ಣ ಅಭಿವೃದ್ಧಿಯಾಗಲಿದೆ ಮತ್ತು ಒಂದೇ ವರ್ಷದೊಳಗೆ ಮೆಡಿಕಲ್ ಕಾಲೇಜು ಕೂಡಾ ಪೂರ್ಣವಾಗಬಹುದು ಎಂಬ ನಿರೀಕ್ಷೆ ಪುತ್ತೂರಿನ ನಾಗರಿಕರದ್ದಾಗಿದೆ










