ನಶ ಮುಕ್ತ ಸಪ್ತಾಹ : ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲು ಬಿಇಒಗೆ ಮನವಿ

0

ಪುತ್ತೂರು: ಜೂ.17 ರಿಂದ 26 ರವರೆಗೆ ನಡೆಯುವ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ‘ನಶ ಮುಕ್ತ ಅಭಿಯಾನ ಸಪ್ತಾಹ’ ಹಾಗೂ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ನಿವಾರಣೆ ಮತ್ತು ನಿಯಂತ್ರಣ ದಿನಾಚರಣೆ ಅಂಗವಾಗಿ ಪುತ್ತೂರು ಹಾಗೂ ಕಡಬ ತಾಲೂಕಿನ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಸೇವಾ ಕೇಂದ್ರದ ವತಿಯಿಂದ ಜೂ.17ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋನಪ್ಪ ಪೂಜಾರಿ ಅವರನ್ನು ಭೇಟಿ ಮಾಡಿ, ಎಲ್ಲ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಸಹಯೋಗದೊಂದಿಗೆ ಶಾಲೆಗಳಲ್ಲಿ ನಶ ಮುಕ್ತ ಅಭಿಯಾನ ನಡೆಸಲು ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಬಿಇಒ ಮೋನಪ್ಪ ಪೂಜಾರಿ, “ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಶ ಮುಕ್ತ ಅಭಿಯಾನ ನಡೆಸಲು ಆದೇಶ ನೀಡುತ್ತೇನೆ” ಎಂದು ಭರವಸೆ ನೀಡಿದರು.

ಬಿಇಒ ಅವರಿಗೆ ವಿಕಲಚೇತನರ ನಿರ್ದೇಶಕರು, ಬೆಂಗಳೂರು ಇವರ ಕಚೇರಿ ಆದೇಶ ಹಾಗೂ ಮಾದಕ ವಸ್ತುಗಳ ನಶ ಮುಕ್ತ ಅಭಿಯಾನದ ಕೈಪಿಡಿ ನೀಡಿ, ನಶ ಮುಕ್ತ ಭಾರತ ಅಭಿಯಾನದ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ನವೀನ್ ಸ್ಟಿಪನ್ ವೇಗಸ್, ಬಿಆರ್‌ಪಿ ಗೀತಾ, ನರಿಮೊಗ್ರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಪ್ರಸಾದ್, ಬಿಇಒ ಕಚೇರಿ ಸಿಬ್ಬಂದಿ ಪುಷ್ಪ, ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here