






ಬಡಗನ್ನೂರು: ಸಕಾಲದಲ್ಲಿ ಮಳೆ ಬಂದು ಕೃಷಿ ಚಟುವಟಿಕೆ ಚೆನ್ನಾಗಿ ನಡೆದು ಸರ್ವರಿಗೂ ಸುಭೀಕ್ಷೆ ಉಂಟು ಮಾಡುವಂತೆ ವರುಣ ದೇವರ ಕೃಪೆಗಾಗಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂ.21ರಂದು ಬೆಳಗ್ಗೆ 7 ಗಂಟೆಗೆ ಶ್ರೀ ದೇವರಿಗೆ ಸಾಮೂಹಿಕ ಸೀಯಾಳ ಅಭಿಷೇಕ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.


ಈ ಕಾರ್ಯದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













