ನಿಡ್ಪಳ್ಳಿ: ಅಕ್ರಮ ಬೇಲಿ-ಪಂಚಾಯತ್‌ಗೆ ದೂರು

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ಕರ್ನಪ್ಪಾಡಿಯಿಂದ ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲ ಹಾಗೂ ನುಳಿಯಾಲು ಸಂಪರ್ಕಿಸುವ ಕೂವೆಂಜ ಎಂಬಲ್ಲಿ ಸರಕಾರಿ ಜಾಗದಲ್ಲಿ ವ್ಯಕ್ತಿಯೋರ್ವರು ಅಕ್ರಮವಾಗಿ ಬೇಲಿ ಹಾಕಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಬೆಟ್ಟಂಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಲಾಗಿರುವ ದೂರಿನಲ್ಲಿ ಕರ್ನಪ್ಪಾಡಿ ಮತ್ತು ಕೊರಿಂಗಿಲ ಕಡೆಗೆ ಹಾದು ಹೋಗುವ ರಸ್ತೆಯ ಮಧ್ಯ ಪ್ರದೇಶದಲ್ಲಿ ಸಿಗುವ ಕೂವೆಂಜ ಎಂಬ ಸ್ಥಳದಲ್ಲಿ ಸುರೇಶ್ ಎಂಬವರ ಮನೆಯ ಬದಿಯ ಸರಕಾರಿ ಜಾಗದಲ್ಲಿ ಅತಿಕ್ರಮವಾಗಿ ಬೇಲಿ ನಿರ್ಮಿಸಲಾಗಿದೆ. ಇದು ತಿರುವು ರಸ್ತೆಯಾದ ಕಾರಣ ಎರಡೂ ಬದಿಯಿಂದ ವಾಹನದಲ್ಲಿ ಸಾಗುವವರಿಗೆ ದಾರಿ ನೀಡುವುದು ಕಷ್ಟ. ಇದರಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಮುಕ್ತ ಸಂಚಾರಕ್ಕೆ ಅಡಚಣೆ ಮಾಡಿದವರಿಗೆ ಕಾನೂನಾತ್ಮಕ ಕ್ರಮ ಕೈಗೊಂಡು ಅನಽಕೃತ ನಿರ್ಮಿತವಾದ ಬೇಲಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಊರಿನ ಹತ್ತು ಸಮಸ್ತರು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ. ದೂರಿನ ಪ್ರತಿಯಲ್ಲಿ ಸ್ಥಳೀಯ 29 ನಿವಾಸಿಗಳು ಹೆಸರು ಮತ್ತು ಸಹಿ ಹಾಕಿದ್ದಾರೆ. ದೂರು ಪ್ರತಿಯನ್ನು ಜಿ.ಪಂ. ಸಿಇಒ ಹಾಗೂ ತಾಲೂಕು ಪಂಚಾಯತ್ ಇಒ ರವರಿಗೂ ನೀಡಲಾಗಿದೆ.

LEAVE A REPLY

Please enter your comment!
Please enter your name here