ಬೊಳುವಾರು ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದ ದಿ| ನಾರಾಯಣ ಮಣಿಯಾಣಿ ಅವರ ಮನೆಗೆ ಎಮ್.ಎಲ್.ಸಿ.ಕಿಶೋರ್ ಭೇಟಿ

0

ಪುತ್ತೂರು: ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದ ಬೊಳುವಾರು ದಿ|ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ ಅವರು ನಿಧನದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಜೂ.20ರಂದು ಅವರ ಮನೆಗೆ ಭೇಟಿ ನೀಡಿದರು.


ದಿ| ನಾರಾಯಣ ಮಣಿಯಾಣಿ ಮತ್ತು ದಿ| ಭಾಗೀರಥಿ ಅವರ ಮಕ್ಕಳಾದ ಪ್ರವೀಣ್ ಬೊಳುವಾರು ಮತ್ತು ನೀಲಂತ್ ಬೊಳುವಾರು ಹಾಗು ಡಾ. ವಾಣಿ ಅವರಲ್ಲಿ ಕಿಶೋರ್ ಕುಮಾರ್ ಅವರು ಮಾತನಾಡಿ ಸಂತಾಪ ಸೂಚಿಸಿದರು.

ಈ ಸಂದರ್ಭ ನಾರಾಯಣ ಮಣಿಯಾಣಿ ಅವರ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಜೊತೆಗಿದ್ದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಹಿಂದುಳಿದ ಮೋರ್ಚಾ ಅಧ್ಯಕ್ಷ ನಿರಂಜನ್ ಮಾನ್ಯ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಾಗೇಂದ್ರ ಬಾಳಿಗ, ನಾಗೇಶ್ ಟಿ.ಎಸ್, ಸುನಿತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here