






“ದೇಶಸೇವೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಸೈನಿಕ ಶಾಲೆಗಳು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಾಗಿವೆ.” – ಪ್ರಮೀಳಾ ಎನ್. ಡಿ.
“ನವೋದಯದ ಒಂದು ಸೀಟು, ಪ್ರತಿಭಾವಂತ ಮಗುವಿನ ಬದುಕನ್ನೇ ಬದಲಾಯಿಸಬಲ್ಲದು; ಅದು ಶಿಕ್ಷಣ ಮಾತ್ರವಲ್ಲ, ಭವಿಷ್ಯದ ಭದ್ರ ಬುನಾದಿಯೂ ಹೌದು.” – ಸುಮಿತ್ರಾ ಪಿ.


ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಶೈಕ್ಷಣಿಕ ವರ್ಷ 2026-27 ನೇ ಸಾಲಿನಲ್ಲಿ ನಡೆಯಲಿರುವ ಜವಾಹರ್ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆ, ಎನ್. ಏಮ್. ಏಮ್. ಎಸ್ ಸ್ಕಾಲರ್ ಶಿಪ್ ತರಗತಿಗಳು ಹಾಗೂ ಸೈನಿಕ ಶಾಲಾ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿಗೆ ದಾಖಲಾತಿ ಪ್ರಾರಂಭಗೊಂಡಿದೆ. ಪ್ರಸ್ತುತ 5ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಿ ಇದರ ಸದುಪಯೋಗವನ್ನು ಪಡೆದುಕೊಂಡು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಪ್ರಾಧಿಕಾರದ ಅಧೀನಕ್ಕೊಳಪಟ್ಟಂತಹ ನವೋದಯ ವಿದ್ಯಾಲಯದಲ್ಲಿ 6 ರಿಂದ 12ನೇ ತರಗತಿ ಗಳಿಗೆ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಉಚಿತ ವಸತಿಯುತ ಶಿಕ್ಷಣವನ್ನು ಪಡೆಯಬಹುದಾಗಿದೆ. ಪ್ರಗತಿ ಸ್ಟಡಿ ಸೆಂಟರ್ ನಲ್ಲಿ 20 ವರ್ಷಗಳಿಂದ ನವೋದಯ ತರಬೇತಿ ತರಗತಿಗಳನ್ನು ನೀಡುತ್ತಾ ಬಂದಿದ್ದು ಈವರೆಗೆ ಒಟ್ಟು 164 ವಿದ್ಯಾರ್ಥಿಗಳು ಆಯ್ಕೆಗೊಂಡ ಪುತ್ತೂರಿನ ಏಕೈಕ ಸಂಸ್ಥೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ ತನಕ ಅವಕಾಶವಿದ್ದು ಪರೀಕ್ಷೆಯು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.



ಸೈನಿಕ ಶಾಲೆಯ ಪ್ರವೇಶ
ದೇಶಸೇವೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಸೈನಿಕ ಶಾಲೆಗಳು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಾಗಿವೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ನಾಯಕತ್ವ, ದೈಹಿಕ ಸಾಮರ್ಥ್ಯ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವುದು ಅಗತ್ಯವಾಗಿದೆ.ಸೈನಿಕ ಶಾಲಾ ಪ್ರವೇಶ ಪರೀಕ್ಷೆ ತರಬೇತಿಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಕೌಶಲ್ಯವನ್ನು ಬೆಳೆಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದಾಗಿದೆ. ಸೈನಿಕ ಶಾಲೆಯ ಪ್ರವೇಶ ಒಂದು ಕನಸು, ಅದು ಶಿಸ್ತು, ಸೇವೆ ಮತ್ತು ಸಾಧನೆಯ ಜೀವನದ ಮೊದಲ ಹೆಜ್ಜೆ.
ಆಸಕ್ತ ವಿದ್ಯಾರ್ಥಿಗಳ ಪೋಷಕರು, ಧರ್ಮಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನ ಕಛೇರಿಗೆ ಮುಖತಃ ಬಂದು ಮಾತನಾಡಬಹುದು ಅಥವಾ ದೂರವಾಣಿ ಸಂಖ್ಯೆ 9900109490, 9448536143 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್ ನಾಥ್ ತಿಳಿಸಿರುತ್ತಾರೆ.










