






ಪುತ್ತೂರು : ಭಾರತ ಸರಕಾರದ ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಅಗ್ನಿಪಥ್ ಯೋಜನೆಗೆ ಆಯ್ಕೆಯಾದ ಕಾಣಿಯೂರಿನ ರವಿಕಿರಣ್‌ರವರಿಗೆ ಜೂ.20 ಸವಣೂರು ಜ್ಯೂನಿಯರ್ ಕಾಲೇಜ್ ನಲ್ಲಿ ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಅಭಿನಂದಿಸಿ ಮಾತನಾಡಿದ ಸವಣೂರು ಜೂನಿಯರ್ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮತ್ತು ಸಮರ್ಥ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ ಸುಲಾಯ ದೇವಸ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಜೊತೆಗೆ ದೇಶಸೇವೆ ಮಾಡುವ, ಅಗ್ನಿಪಥ್ ಯೋಜನೆಯಲ್ಲಿ ಹೆಚ್ಚು ಹೆಚ್ಚು ಯುವಕ-ಯುವತಿಯರು ಸೇರಿ, ದೇಶವನ್ನು ಕಟ್ಟುವ ಕೆಲಸ ನಡೆದಾಗ ದೇಶದ ಅಭಿವೃದ್ಧಿ ಇನ್ನಷ್ಟು ಬೆಳೆಯಲು ಸಾಧ್ಯವಿದೆ ಎಂದರು.



ಅಧ್ಯಕ್ಷತೆ ವಹಿಸಿದ ಸರಕಾರಿ ಪ್ರಾಢಶಾಲೆಯ ಮುಖ್ಯ ಗುರು ಶ್ರೀಲತಾ ಮಾತನಾಡಿ ನಮ್ಮ ದೇಶ ಕಾಯುವ ಸೈನಿಕನ ತ್ಯಾಗ, ಶಿಸ್ತು, ಸಂಯಮದಿಂದ ನಾವು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಅಂತಹ ವೀರ ಸೈನಿಕರ ಆದರ್ಶವನ್ನು ನಾವೆಲ್ಲಾ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಸಮರ್ಥ ಜನಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ ಸವಣೂರು, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸರಸ್ವತಿ, ಪವಿತ್ರ, ರೀನಾ, ನಯನ, ವೀಣಾ, ಶ್ರೀಮತಿ ಕವಿತಾ ಸಿ ಕೆ, ದೈಹಿಕ ಶಿಕ್ಷಕ ಮಾಮಚ್ಚನ್ ಉಪಸ್ಥಿತರಿದ್ದರು. ಶಿಕ್ಷಕ ಕಿಶಾನ್ ಬಿ ವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










