







ಪುತ್ತೂರು: 2025-26ನೇ ಸಾಲಿನ ಅಗ್ನಿಪಥ್ ನೇಮಕಾತಿಯಲ್ಲಿ ಪುಣಚದ ಮುರಳೀಧರ ಬಳಂತಿಮೊಗರು ಭಾರತೀಯ ಭೂ ಸೇನೆಗೆ ಆಯ್ಕೆಯಾಗಿದ್ದಾರೆ. ಇವರು ತಮ್ಮ ಮುಂದಿನ ತರಬೇತಿಯನ್ನು ಮಹರಾಷ್ಟ್ರದ ನಾಸಿಕ್ ಆರ್ಮಿ ಟ್ರೈನಿಂಗ್ ಸೆಂಟರ್ನಲ್ಲಿ ಪಡೆದುಕೊಳ್ಳಲಿದ್ದಾರೆ.


ಪುಣಚ ಗ್ರಾಮದ ಬಳಂತಿಮೊಗರು ಮನೆಯ ಕೊರಗಪ್ಪ ಪೂಜಾರಿ ಮತ್ತು ಶಾರದಾ ದಂಪತಿಯ ಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಪ್ರ. ಶಾಲೆ ಮೂಡಂಬೈಲು ಮತ್ತು ಪ್ರೌಢ ಶಿಕ್ಷಣವನ್ನು ಪುಣಚ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ಪಡೆದಿದ್ದು ಪದವಿ ಪೂರ್ವ ಶಿಕ್ಷಣವನ್ನು ಕೊಂಬೆಟ್ಟು ಸ.ಪ.ಪೂ ಕಾಲೇಜಿನಲ್ಲಿ ಪಡೆದಿದ್ದಾರೆ.













