ಜೂ.23: ಪುತ್ತೂರಿನ ಹಲವೆಡೆ ವಿದ್ಯುತ್ ನಿಲುಗಡೆ

0

ಪುತ್ತೂರು: ರಸ್ತೆ ಅಗಲೀಕರಣ ನಿಮಿತ್ತ ಜೂ.23 ರಂದು ಪೂರ್ವಾಹ್ನ ಗಂಟೆ 10:೦೦ ರಿಂದ ಅಪರಾಹ್ನ 5:30 ರವರೆಗೆ ದರ್ಬೆ, ಟೌನ್ ಓಲ್ಡ್ ಮತ್ತು ಉಪ್ಪಿನಂಗಡಿ ವಾಟರ್‌ಸಪ್ಲೈ ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಕೆಎಸ್‌ಆರ್‌ಟಿಸಿ, ಟ್ಯಾಕ್ಸಿ ಸ್ಟಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರೋಡ್, ಎ.ಪಿ.ಎಂ.ಸಿ. ರೋಡ್, ಸಾಮೆತ್ತಡ್ಕ, ಎಂ.ಟಿ. ರೋಡ್, ಚಿಕ್ಕಪುತ್ತೂರು, ಮಡಿವಾಳಕಟ್ಟೆ, ಬೊಳ್ವಾರು, ಬೈಪಾಸ್, ಕೋರ್ಟ್ ರೋಡ್, ಕಲ್ಲಿಮಾರ್, ಬಪ್ಪಳಿಗೆ, ಮಿಷನ್ ಗುಡ್ಡೆ, ಪೋಸ್ಟ್ ಆಫೀಸ್, ತೆಂಕಿಲ, ಪರ್ಲಡ್ಕ ಜಂಕ್ಷನ್, ಮಚ್ಚಿಮಲೆ, ಬಾಲವನ, ಕುಂಜೂರು, ಹಾರಾಡಿ ಮತ್ತು ಮೋತಿಮಹಲ್ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.23 ರಂದು ಪೂರ್ವಾಹ್ನ 1೦:೦೦ ರಿಂದ ಸಾಯಂಕಾಲ 4.೦೦ ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು – ಸುಳ್ಯ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಮಾಡಾವು ಹಾಗೂ 33/11ಕೆವಿ ಬೆಳ್ಳಾರೆ, ಗುತ್ತಿಗಾರು, ಕಾವು ಮತ್ತು ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here